ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮತ್ತೆ ಪಕ್ಷದಲ್ಲಿ ಮಣೆ ಹಾಕಲಾಗಿದೆ ಎಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ (bjp) ಅಸಮಧಾನದ (Dissatisfied with BJP)ಹೊಗೆ ಆರಂಭವಾಗಿದೆ..
ಕಳೆದ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ವಿರುದ್ದ ಮೂಲ ಬಿಜೆಪಿ ಗರಿಂದ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿತ್ತು.ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹಾಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್( MLA Shivram Hebbar,) ಹೈ ಕಮಾಂಡ್ ಗೆ(BJP High Command) ದೂರು ನೀಡಿದ್ದರು. ಹೆಬ್ಬಾರ್ ದೂರಿಗೆ ಸ್ಪಂದಿಸಿದ ಹೈಕಮಾಂಡ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ದ ಕೇವಲ ಎರಡು ತಿಂಗಳು ಮಾತ್ರ ಕ್ರಮಕೈಗೊಂಡಿತ್ತು. ಈಗ ಮತ್ತೆ ಪಕ್ಷ ಸೇರ್ಪಡೆ ಆಗುವ ಮೂಲಕ ಈ ಹಿಂದಿನ ಹುದ್ದೆಯನ್ನೆ ಅಲಂಕರಿಸಿದ್ದಾರೆ.
ಇದರಿಂದ ಹೆಬ್ಬಾರ್ ಅಭಿಮಾನಿ ಎಂದು ಗುರುತಿಸಿಕೊಂಡ ಯಲ್ಲಾಪುರ ಪಟ್ಟಣ ಪಂಚಾಯತ್ ಸದಸ್ಯ ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖ ಸತೀಶ್ ಶಿವಾನಂದ ನಾಯ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕೂಡಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದ ಶಿವರಾಮ ಹೆಬ್ಬಾರ್ ಗೆಲುವಿನ ಅಂತರ ಕಡಿಮೆಯಾಗುವಲ್ಲಿ ಸ್ವಪಕ್ಷದ ಕೆಲವರ ಪಕ್ಷ ವಿರೋಧಿ ನಡೆ ಕಾರಣವಾಗಿತ್ತು ಎಂಬುದನ್ನು ಸ್ವತಃ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ಅವರೆ ಪಕ್ಷದ ಜಿಲ್ಲಾ ಪ್ರಮುಖರಿಗೆ ಲಿಖಿತ ಪತ್ರದ ಮೂಲಕ ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದರು.
ಆದರೆ ಕೆವಲ ನಾಮಕಾವಸ್ತೆ ಕ್ರಮ ಜರುಗಿಸಿದಂತೆ ಪಕ್ಷದಲ್ಲಿದ್ದ ಪದವಿಗಳಿಂದ ವಿಮುಕ್ತಿಗೊಳಿಸಿ ತೇಪೆ ಹಚ್ಚುವ ಕೆಲಸವಾಗಿತ್ತು ಆದರೆ ಇದೀಗ ಪಕ್ಷದ ಅಭ್ಯರ್ಥಿಯನ್ನೆ ಸೋಲಿಸ ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನೋಡಿ ನಿಷ್ಟಾವಂತ ಹೆಬ್ಬಾರ್ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದ್ದು ಈ ನಡೆಯನ್ನು ಅತ್ಯಂತ ಗಂಭೀರವಾಗಿ ಖಂಡಿಸುತ್ತೆವೆ ಎಂದಿದ್ದಾರೆ.
ಪ್ರಮುಖವಾಗಿ ನನ್ನನ್ನು ಸಹ ಹೆಸರಿಗೆ ಮಾತ್ರ ಶಕ್ತಿಕೇಂದ್ರದ ಅಧ್ಯಕ್ಷೆಯನ್ನಾಗಿಸಿ ಫೋನ್ ಕರೆ ಮಾಡುವ ಕೆಲಸಕ್ಕೆ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಿದ ದೋರಣೆ ಅತ್ಯಂತ ಖಂಡನೀಯ ಎಂದು ಪಟ್ಟಣ ಪಂಚಾಯತ್ ಮಾಜಿ ಅಧಕ್ಷೆ ಸುನಂದದಾಸ್ ಆಕ್ರೋಶ ಹೊರಹಾಕಿದ್ದಾರೆ.ಪಕ್ಷದ ವರಿಷ್ಟರ ಈ ನಡೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾದ ನಮ್ಮೆಲ್ಲರ ಚುನಾವಣೆ ಸಂದರ್ಭದ ಶ್ರಮಕ್ಕೆ ಅವಮಾನಿಸಿದಂತಾಗಿದೆ. ಈ ಸಂಬಂಧ ಪಕ್ಷದ ಜಿಲ್ಲಾ ವರಿಷ್ಟರು ಮತ್ತು ರಾಜ್ಯದ ವರಿಷ್ಟರು ಪಕ್ಷದ ಶಾಸಕರ ಗಮನಕ್ಕು ತರದೆ ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದ ಪದವಿಗಳಿಗೆ ಮರು ಸೇರ್ಪಡೆ ಮಾಡಿರುವುದು ಶಾಸಕರಿಗೆ ಮಾಡಿದ ಅಪಮಾನ ಇದನ್ನು ಹೆಬ್ಬಾರ್ ಅಭಿಮಾನಿ ಬಳಗ ಉಗ್ರವಾಗಿ ವಿರೋಧಿಸುತ್ತಿದೆ.
ತಕ್ಷಣ ಪಕ್ಷದ ನಾಯಕರು ಶಾಸಕರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು ಈ ಕ್ರಮದ ಬಗ್ಗೆ ನಿರ್ಧರಿಸಬೇಕಿದೆ ಎಂಬುದು ಹೆಬ್ಬಾರ್ ಬೆಂಬಲಿಗರಾಗಿ ಆಗ್ರಹಿಸುತ್ತಿದ್ದೇವೆ. ಇಲ್ಲವಾದಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವೆ ಅಧಿಕೃತವಾಗಿ ಪಕ್ಷದ್ರೋಹಿಗಳಿಗೆ ಬಲ ತುಂಬಿ ಪಕ್ಷದಿಂದ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿ ವಿರುದ್ದ ಪ್ರಚಾರಮಾಡಿ ಸೋಲಿಸುವಂತೆ ಪ್ರೇರಣೆ ನೀಡಿದಂತಾಗಲಿದೆ. ಹಾಗೇನಾದರು ಆದಲ್ಲಿ ಪಕ್ಷ, ತತ್ವ, ಸಿದ್ದಾಂತ, ಶಿಸ್ತು ಎಲ್ಲವು ತೋರ್ಪಡಿಕೆಯ ಭಾಷಣದ ಪದಗಳೆಂದು ಕಾರ್ಯಕರ್ತರಾದ ನಾವುಭಾವಿಸುವಂತಾಗಲಿದೆ ದಯವಿಟ್ಟು ಅದಕ್ಕೆ ಆಸ್ಪದ ನೀಡದೆ ಕ್ರಮಜರುಗಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ, ಸದಸ್ಯರಾದ ಪ್ರಶಾಂತ್ ತಳವಾರ, ಅಬ್ದುಲ್ ಅಲಿ ನೂತನ ನಗರ, ಹಲೀಮ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಗರಾಜ್ ಅಂಕೋಲೆಕರ್ ಉಪಸ್ಥಿತರಿದ್ದರು.