ಕಾರವಾರ : ಕೇವಲ ತಾನಷ್ಟೆ ದೊಡ್ಡವನಾಗದೆ ಗ್ರಾಮ, ಪಟ್ಟಣ, ಜಿಲ್ಲೆ, ಜಾತಿ, ಧರ್ಮ ಅನ್ನೋದಕ್ಕಿಂತ ನಾವೆಲ್ಲರೂ ದೇಶದ ಪ್ರಜೆಗಳು, ಭಾರತಮಾತೆ ಮಕ್ಕಳು ಎಂಬ ಭಾವನೆಯೊಂದಿಗೆ ಜೀವನ ನಡೆಸಬೇಕು.ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವದರೊಂದಿಗೆ ತನ್ನ ದುಡಿಮೆಯ ಅಲ್ವ ಸ್ವಲ್ಪ ಪರಿಶ್ರಮ ಬಡವರಿಗೆ ತಲುಪಿಸುವವನೆ ನಿಜವಾದ ಬಡವರ ಪಾಲಿನ ಭಾಗ್ಯದಾತ ಆಗೋದಕ್ಕೆ ಸಾಧ್ಯ. ಅದಕ್ಜೆ ತಾಜಾ ಉದಾರಣೆ ಎಂದರೆ ಅನಂತಮೂರ್ತಿ ಹೆಗಡೆ.
ಹೌದು ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬ್ಯಾಗದ್ದೆ ಮೂಲದ ಅನಂತಮೂರ್ತಿ ಹೆಗಡೆ, ಇವರು ತಮ್ಮ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ಬಡವರ್ಗದವರಿಗಾಗಿ ಸಾಮಾಜಿಕ ಕಾರ್ಯವನ್ನು ನಡೆಸುತ್ತಾ ಬಂದಿದ್ದು, ಇದೀಗ ಜಿಲ್ಲಾಧ್ಯಂತ ಅನೇಕ ಜನಪರ ಕಾರ್ಯಗಳನ್ನ ಮಾಡುವ ಮೂಲಕ ಬಡವರ ಪಾಲಿನ ಭಾಗ್ಯದಾತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಇವರು ಉತ್ತರಕನ್ನಡ ಜಿಲ್ಲೆಯ ,ಶಿರಸಿ, ಯಲ್ಲಾಪುರ, ಹೊನ್ನಾವರ,ಭಟ್ಕಳ,ಕಿತ್ತೂರು ಸೇರಿದಂತೆ ಹಲವು ಭಾಗದಲ್ಲಿ ಆಟೋ ಮತ್ತು ಗೂಡ್ಸ್ ರಿಕ್ಷಾ ಚಾಲಕ ,ಮಾಲೀಕರಿಗೆ ಔತನಕೂಟ , ಉಚಿತ ಸಮವಸ್ತ್ರ ವಿತರಿಸುವ ಜೊತೆಗೆ ಆಟೋರಿಕ್ಷಾ ಪಾಸಿಂಗ್ ಯೋಜನೆ, ಆಟೋರಿಕ್ಷ ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಂಡು ಬಂದಿದ್ದಾರೆ.
ತಮ್ಮ ಜನಸೇವೆ ಕಾರ್ಯವನ್ನ ಮುಂದುವರೆಸಿರುವ ಅನಂತಮೂರ್ತಿ ಹೆಗಡೆ ಅವರು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಇದೇ ತಿಂಗಳು 26-10-2023 ರ ಗುರುವಾರ ಬೆಳಿಗ್ಗೆ 10-30ಕ್ಕೆ ನಗರದ ಅಜ್ವೆ ಓಷನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಆಟೋ ರಿಕ್ಷ ಚಾಲಕ, ಮಾಲೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿಕೊಂಡಿದ್ದಾರೆ. ಕಾರವಾರ-ಅಂಕೋಲಾ ಕ್ಷೇತ್ರದ ಜನಪ್ರೀಯ ಶಾಸಕ ಸತೀಶ್ ಸೈಲ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.