ಸುದ್ದಿಬಿಂದು ಬ್ಯೂರೋ
ಹೊನ್ನಾವರ : ತಾಲೂಕಿನ ಬಳ್ಕೂರಿನಲ್ಲಿ ನೆಲೆಸಿರುವ ಶಕ್ತಿದೇವತೆ ಶ್ರೀಕ್ಷೇತ್ರ ನೀಲಗೋಡು ಯಕ್ಷಿ ಔಡೇಶ್ವರಿ ದೇವಸ್ಥಾನಕ್ಕೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ(Karwar Ankola Assembly) ಶಾಸಕ ಸತೀಶ ಸೈಲ್ ಅವರು ತಮ್ಮ ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಭೇಟಿ ‌ನೀಡಿ ನವಚಂಡಿಯಾದ ನೆರವೇರಿಸಿದರು.

ಸತೀಶ ಸೈಲ್ ಈ ಹಿಂದಿನಿಂದಲ್ಲೂ ನೀಲಗೋಡು ಯಕ್ಷಿ ಚೌಡೇಶ್ವರಿ(Nilagoda Yakshi Chaudeshwari) ದೇವಸ್ಥಾನಕ್ಕೆ ನಡೆದುಕೊಂಡು ಬಂದಿದ್ದರು.ದಸರಾ(Dasara,)ಹಬ್ಬದ ಅಂಗವಾಗಿ ಸೋಮವಾರ ಕುಟುಂಬಸ್ಥರ ಜೊತೆ ದೇಗುಲಕ್ಕೆ ಭೇಟಿ ನೀಡಿದ ಶಾಸಕರು ಮಾದೇವ ಸ್ವಾಮಿಯವರ ನೇತೃತ್ವದಲ್ಲಿ ನವಚಂಡಿ ಯಾಗ ಮಾಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀದೇವಿಯ ದರ್ಶನ ಪಡೆದರು.

ಇನ್ನೂ ದೇವಸ್ಥಾನದ ಅಭಿವೃದ್ಧಿಗಾಗಿ ಸದಾ ತಾವು ಜೊತೆಗೆ ಇರುವುದಾಗಿ ದೇಶವಸ್ಥಾನದ ಪ್ರಧಾನ ಅರ್ಚಕರಾಗಿರುವ ಮಾದೇವಸ್ವಾಮಿಯವರಿಗೆ ಭರವಸೆ ನೀಡಿದ್ದು, ಸರಕಾರದಿಂದ ಸಿಗಬೇಕಾದ ಅನುದಾನವನ್ನ ಕೊಡಿಸುವುದಾಗಿ ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದರು.ಸಾಮಾನ್ಯ ಭಕ್ತರಂತೆ ಸತೀಶ ಸೈಲ್ (MLA Satish Sail)ದಂಪತಿಗಳು ಶ್ರೀದೇವಿಯ ಅನ್ನಪ್ರಸಾದವನ್ನು ಸ್ವೀಕರಿಸಿ ಪುನಿತರಾದ್ದರು.