suddibindu.in
ಕಾರವಾರ: ಕರೋನಾ ಬಂದ ಸಂದರ್ಭದಲ್ಲಿ ಜನ ಸಂಕಷ್ಟಕ್ಕೆ ಒಳಗಾಗಿದ್ದರು.ಸಿಲಿಂಡರ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿ ಜನರಿಂದ ಅದನ್ನ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.ಜನರ ಕಷ್ಟವನ್ನ ತಿಳಿದ ನಮ್ಮ ನಾಯಕರು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡಿ ಯಶಸ್ವಿಯಾಗಿದ್ದೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಅವರು ಇಂದು ಕಾರವಾರದಲ್ಲಿ ತಾಲೂಕಾ ಮಟ್ಟದ ಗ್ಯಾರಂಟಿ ಅನುಷ್ಠನ ಸಮಿತಿ ಕಚೇರಿಯನ್ನ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ರಾಜ್ಯಾದ್ಯಂತ ಈ ಯೋಜನೆಯ ಲಾಭ ಸಿಗುವಂತಾಗಿದೆ.ಮುಂದೆಯೂ ಸಿಗಲಿದೆ.ಯೋಜನೆಯ ಲಾಭ ಇನ್ನಷ್ಟು ಜನರಿಗೆ ತಲುಪಿಸಬೇಕು ಎನ್ನುವುದು ನಮ್ಮ ಸರಕಾರದ ಉದ್ದೇಶ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಸತೀಶ ನಾಯ್ಕ, ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲ ದಿನದಲ್ಲಿ ಯೋಜನೆಯನ್ನ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.ವಿರೋಧಿಗಳು ಈ ಬಗ್ಗೆ ಸಾಕಷ್ಟು ಅಪ್ರಚಾರದ ಮಾಡಿದ್ದರು, ಅದಕ್ಕೆಲ್ಲದಕ್ಕೂ ಈಗ ಸರಿಯಾದ ಉತ್ತರ ಸಿಕ್ಕಿದೆ..ಈ ಯೋಜನೆ ಸ್ಥಗಿತವಾಗುವ ಪ್ರಶ್ನೆಯಿಲ್ಲ ಎಂದು ಸಿ ಎಂ ಅವರು ಸೇರಿದಂತೆ ಎಲ್ಲರೂ ಭರವಸೆ ನೀಡಿದ್ದಾರೆ. ಇದು ನಿರಂತರವಾಗಿ ಮುಂದುವರೆಯಲಿದೆ ಅಂತಾ ಹೇಳಿದರು.
ಅಧ್ಯಕ್ಷತೆ ವಹಿಸಿದ ಶಾಸಕ ಸತೀಶ್ ಸೈಲ್ ಅವರು ಮಾತ್ನಾಡಿ ಈ ಯೋಜನೆ ಪ್ರತಿಯೊಬ್ಬರ ಮನೆಗೆ ಹೋಗಬೇಕು.ಇದಕ್ಕೆ ಮಾಧ್ಯಮದರ ಸಹಕಾರ ಕೂಡ ಬೇಕು.ಎಲ್ಲರೂ ಕೂಡಿ ಸರಕಾರ ಕೊಟ್ಟ ಪಂಚ ಗ್ಯಾರಂಟಿ ಜನರಿಗೆ ಮುಟ್ಟಿಸುವಂತಾಗಬೇಕು.ನಿಷ್ಠೆಯಿಂದ ಯೋಜನೆ ಪಡೆದುಕೊಳ್ಳಬೇಕು.ಯೋಜನೆ ಅವಶ್ಯಕತೆ ಇಲ್ಲದೆ ಇರುವವವರು ಸಹ ಇದರ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಸರಕಾರದ ಹಣ ಪೊಲ್ ಆಗದಂತೆ ನೋಡಿಕೊಳ್ಳಬೇಕು.ಸರಕಾರಿ ನೌಕರಿಯಲ್ಲಿ ಇರುವವರು ಕೆಲವೊಂದು ಯೋಜನೆಯ ಲಾಭ ಪಡೆಯುವಂತಾಗಿದೆ. ಹೀಗಾಗಿ ಅದನ್ನ ಪಡೆಯಲು ನಾನು ಯೋಗ್ಯವಾಗಿದ್ದೀನಾ ಎನ್ನುವುದನ್ನ ತಿಳಿದುಕೊಂಡು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ರಾಜೇಂದ್ರ ರಾಣೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕಾರವಾರ ಬ್ಲಾಕ್ ಅಧ್ಯಕ್ಷ ಸಮಿರ್ ನಾಯ್ಕ ಹಾಜರಿದ್ದರು.
ಇದನ್ನೂ ಓದಿ