ಸುದ್ದಿಬಿಂದು ಬ್ಯೂರೋ
ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಜ್ ಬಳಿ ಪ್ಲೈಓವರ್ ಕನೆಕ್ಟ ಮಾಡುವ ಸುರಂಗ ಸುರಕ್ಷಿತವಾಗಿದ್ದು, ಅದನ್ನು ವಾಹನ ಸಂಚಾರಕ್ಕೆ ಪುನಃ ಪ್ರಾರಂಭಿಸಿ ಎಂದು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಇಲ್ಲ ಶುಕ್ರವಾರ ಸುರಂಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.
ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾದರೆ, 4 ಕಿಮೀ ಬಿಣಗಾ ಘಟ್ಟ ಸುತ್ತಿ ಬಳಸಿ ಕಾರವಾರ ತಲುಪುವ ಕಷ್ಟ ತಪ್ಪಲಿದೆ. ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಟೋಲ್ ಬಂದ್ ಮಾಡುವಂತೆ ಒತ್ತಾಯಿಸಿದ್ದರು. ಆದರೆ ಮಳೆಗಾಲದ ಆರಂಭದಲ್ಲಿ ಟನಲ್ ಸೋರಿಕೆ ಆಗಿರುವುದರಿಂದ ಐಆರ್ ಬಿ ಕಂಪನಿ ಟನಲ್ ಬಂದ್ ಮಾಡಿ, ಟೋಲ್ ಮುಂದುವರೆಸಲಾಗಿತ್ತು.
ಟನಲ್ ಸೋರಿಗೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿತ್ತು. ನಂತರ ಪುಣೆಯ ಟೆಕ್ನಾಲಜಿ ಯುನಿವರ್ಸಿಟಿ ಸುರಂಗ ಸುರಕ್ಷಿತವಾಗಿದೆ ಎಂದು ವರದಿ ನೀಡಿತ್ತು. ಜಿಲ್ಲಾಡಳಿತಕ್ಕೆ ವರದಿ ತಲುಪಿದೆ ಎನ್ನಲಾಗಿದೆ. ಉಸ್ತುವಾರಿ ಕಾರ್ಯದರ್ಶಿ ಆಗಿರುವ ರಿತೇಶ್ ಕುಮಾರ್ ಸಿಂಗ್ ಸುರಂಗ ಮಾರ್ಗ ತೆರೆಯಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇತ್ತ ಸುರಂಗ ಮಾರ್ಗದ ದಾರಿಗೆ ಐಆರ್ ಬಿ ಹಾಕಿದ್ದ ಜಲ್ಲಿಕಲ್ಲು ಗೋಡೆಯನ್ನು ಇಂದು ಮಂಗಳವಾರ ತೆರವು ಮಾಡಿದ್ದು, ಬ್ಯಾರಿಕೇಡ್ ಮಾತ್ರ ಇಟ್ಟಿದೆ. ಯಾವುದೇ ಕ್ಷಣದಲ್ಲಿ ಸುರಂಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.
ಸುರಂಗ ಮಾರ್ಗ ಮುಕ್ತ ಮಾಡದಿದ್ದರೆ, ಸೆ. 29 ರಂದು ಹೋರಾಟ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ತಿಳಿಸಿದ್ದರು.
ಅಲ್ಲದೆ ಸುರಂಗ ಮಾರ್ಗವನ್ನು ಬಲವಾದ ಕಾರಣ ಇಲ್ಲದೆ ಮುಚ್ಚಲಾಗಿತ್ತು.
ಒಂದು ಮೂಲಗಳ ಪ್ರಕಾರ ಸುರಂಗದಲ್ಲಿ ಉಂಟಾಗಿದ್ದ ಒಂದಿಷ್ಟು ಸಮಸ್ಯೆಗಳನ್ನ ದುರಸ್ತಿ ಮಾಡಿಕೊಂಡ ಐ ಆರ್‌ಬಿ ಕಂಪನಿ ಈಗ ಸಂಚಾರಕ್ಕೆ ಅವಕಾಶ ನೀಡಲು ಮುಂದಾಗಿದೆ ಎನ್ನಲಾಗಿದೆ.
ಮಾಧ್ಯಮಗಳಲ್ಲಿ ಸುರಂಗ ಮಾರ್ಗದಲ್ಲಿ ಸೋರಿಕೆ ಆಗುತ್ತಿದೆ ಎನ್ನುವ ಬಗ್ಗೆ ವರದಿಗಳು ಪ್ರಸಾರವಾದ ಬಳಿಕ ಎಚ್ಚೆತ್ತುಕೊಂಡಿದ್ದ ಐ ಆರ್ ಬಿ ಕಂಪನಿ ಸುರಂಗದೊಳಗಿನ ಕಾಮಗಾರಿ ಸರಿಪಡಿಸಿಕೊಂಡ ಬಳಿಕ ಈಗ ಸಂಚಾರ ಮುಕ್ತಗೊಳಿಸಲು ಮುಂದಾಗಿದೆ ಎನ್ನಲಾಗಿದೆ.
ಆದರೆ ಕಂಪನಿ ಮಾಡಿಕೊಂಡ ಎಡವಟ್ಟಿನಿಂದಾಗಿ ಇಷ್ಟುದಿನಗಳ ಕಾಲ ಈ ಸುರಂಗ ಮಾರ್ಗ ಬಂದ್‌ಆಗಿರೋ ವಿಚಾರ ರಾಜಕೀಯವಾಗಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.ಇಷ್ಟಕ್ಕೆಲ್ಲಾ ಎಡವಟ್ಟಿನಿಂದಾಗಿ ಸುರಂಗ ಮಾರ್ಗ ಬಂದ್ ಮಾಡಿಕೊಂಡಿದ್ದ ಐಆರ್ ಬಿ ಕಂಪನಿ ಈಗ ಸುರಕ್ಷತೆ ಮಾಡಿಕೊಂಡು ಎಲ್ಲದಕ್ಕೂ ತೆರೆ ಎಳೆಯುವ ಸಾಧ್ಯತೆ ಇದೆ…