suddibindu.in
ಬೆಂಗಳೂರು :ಲೋಕಸಭಾ ಚುನಾವಣೆ ಇನ್ನೇನು ಕೆಲ ದಿನಗಳಷ್ಟೆ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಫಲಿತಾಂಶಕ್ಕಾಗಿ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷದ ನಾಯಕರು ಎದುರು ನೋಡುತ್ತಿದ್ದಾರೆ ಈ ನಡುವೆ .ಇದರ ನಡುವೆ ಆಂತರಿಕ ವರದಿಯೊಂದು ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು, ಕಮಲ-ದಳ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ.
ಕಾಂಗ್ರೆಸ್‌ಗ ಪಂಚ ಗ್ಯಾರಂಟಿಗಳಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದಿದೆ, ಅದೇ ಗ್ಯಾರಂಟಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೈ ಹಿಡಿಯಲಿವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಮೂರು ಪಕ್ಷಗಳಲ್ಲೂ ಸೋಲು – ಗೆಲುವಿನ ಲೆಕ್ಕಾಚಾರ ಇದೀಗ ಜೋರಾಗಿಯೇ ನಡೆಯುತ್ತಿದೆ.
ಇದನ್ನೂ ಓದಿ
- ಲಿಂಗಾಯತ ಶಾಸಕರು ಬಿಜೆಪಿ ತೊರೆದು ಬನ್ನಿ : ಜಯಮೃತ್ಯುಂಜಯ ಸ್ವಾಮೀಜಿ ಕರೆ
- Today gold and silver rate |ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ : ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್
- ಮಾ.30ಕ್ಕೆ ಬರ್ಗಿಯಲ್ಲಿ ಸುಲುಗಾಯಿ ಪಂದ್ಯಾವಳಿ
ಅದರೆ ಬಿಜೆಪಿ ಪಾಳಯದಲ್ಲಿ ಸ್ವಲ್ಪ ಟೆನ್ನನ್ ಶುರುವಾದಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಬಿಜೆಪಿಯೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿ ಮಾಡುವ ಬಗ್ಗೆ ಟಾರ್ಗೆಟ್ ಹಾಕಿಕೊಂಡಿತ್ತು. ಆದರೆ, ಆಂತರಿಕ ವರದಿ ಬಿಜೆಪಿ ನಾಯಕರ ಕೈ ಸೇರಿದ್ದು, ಆಂತರಿಕ ವರದಿಯಿಂದ ಕಮಲ ಕಲಿಗಳಿಗೆ ಟೆನ್ನನ್ ಶುರುವಾಗಿದೆ.
ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿಯೂ ಜೆಡಿಎಸ್ ಜೊತೆಗೆ ಮೈತ್ರಿಯಾಗಿತ್ತು. ಎಲೆಕ್ಷನ್‌ನಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸಕ್ಸಸ್ ಆಗಿದ್ದರೂ ಕೂಡ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ ಎದುರಾಗುವ ಸಾಧ್ಯತೆ ಇದೆ ಎಂದು ಇಂಟರ್ನಲ್ ರಿಪೋರ್ಟ್ ಹೇಳಿದೆ ಎನ್ನಲಾಗುತ್ತಿದೆ. ಹೀಗಾಗಿ ಕಮಲ ನಾಯಕರಲ್ಲ ಸಹಜವಾಗಿಯೇ ಟೆನ್ಸನ್ ಕಾಣುತ್ತಿದೆ.
28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಇಟ್ಟುಕೊಂಡಿದ್ದ ಕಮಲ- ದಳ ನಾಯಕರಿಗೆ ಆಂತರಿಕ ವರದಿ ಬಿಗ್ ಶಾಕ್ ಕೊಟ್ಟಿದೆ. ಆದರೆ, ಆಂತರಿಕ ವರದಿಯನ್ನು ನೋಡಿದ ಮೇಲೆ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ.ಬಿಜೆಪಿಯ ಬೂತ್, ಜಿಲ್ಲಾ, ತಾಲೂಕು ಹಾಗೂ ಮುಖಂಡರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಒಳಗೊಂಡಿರುವ ಆಂತರಿಕ ವರದಿಯೂ ಬಿಜೆಪಿ ನಾಯಕರಿಗೆ ಆಘಾತಕಾರಿ ಸುದ್ದಿಯಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಗಳನ್ನ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಡೌಟ್ ಎಂದು ಆಂತರಿಕ ವರದಿ ಹೇಳಿಕೆ.ಬಿಜೆಪಿ ನಾಯಕರು ಆಡಳಿತಾರೂಢ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ, ಅಂದುಕೊಂಡ ಗುರಿ ಮುಟ್ಟುವುದು ಇರಲಿ, ಕಳೆದ ಬಾರಿ ಪಡೆದ ಸ್ಥಾನಗಳನ್ನು ಪಡೆಯುವುದು ಡೌಟ್ ಎಂದು ಹೇಳಲಾಗಿದೆ.
ಆಂತರಿಕ ವರದಿ ಪ್ರಕಾರ 17ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದು, ಐದು ಕ್ಷೇತ್ರಗಳಲ್ಲಿ 50 50 ಚಾನ್ಸ್ ಇದ್ದು, ಅಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದೆ ಎನ್ನಲಾಗಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಆಂತರಿಕ ವರದಿ ತಿಳಿಸಿದೆ. ಬಿಜೆಪಿಯ ಹಳೇ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬಹುದು ಎಂದು ಇಂಟರ್ನಲ್ ರಿಪೋರ್ಟ್ ತಿಳಿಸಿದೆ.
ಇನ್ನೂ ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಅಂದ್ರೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಮಲೆನಾಡು ಹಾಗೂ ಕರಾವಳಿ ಭಾಗದ ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸದಲ್ಲಿ ಕೇಸರಿ ನಾಯಕರು ಇದ್ದಾರೆ. ಆದರೆ ಇಲ್ಲಿಯ ಕೂಡ ಬಿಜೆಪಿಗೆ ಸುಲಭದ ಗೆಲ್ಲುವು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇತ್ತ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಹಾವೇರಿ, ವಿಜಯಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ಕಮಲ ಪಾಳಯದ ಆಂತರಿಕ ವರದಿ ಹೇಳಿದೆ. ಬೆಳಗಾವಿ, ದಾವಣಗೆರೆ, ಹಾಸನ, ಕಲಬುರಗಿ ಹಾಗೂ ಬಳ್ಳಾರಿಯಲ್ಲಿ ಬಿಜೆಪಿಗೆ 50 – 50 ಚಾನ್ಸ್ ಇದೆ ಎಂದು ಕಮಲದ ಆಂತರಿಕ ವರದಿ ಹೇಳಿದೆ. ಚಾಮರಾಜನಗರ, ಚಿಕ್ಕೋಡಿ, ಬೀದರ್, ರಾಯಚೂರು, ಕೊಪ್ಪಳ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲುವ ಆತಂಕ ಇದೆ ಎಂದು ಇಂಟರ್ನಲ್ ರಿಪೋರ್ಟ್ ಹೇಳಿದೆ. ಜೆಡಿಎಸ್ ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲಿ ಎರಡನ್ನು ಗೆಲ್ಲಬಹುದು ಎಂದು ಹೇಳಲಾಗಿದೆ. ಇನ್ನೂ ಬೇರೆ ಬೇರೆ ರಾಜ್ಯದಲ್ಲಿಯೂ ಕೂಡ ಬಿಜೆಪಿಗ ಸ್ಪಷ್ಟ ಬಹುಮತ ಕಂಡುಕೊಳ್ಳುವುದು ಅಷ್ಟೊಂದು ಸುಲಭವಾದ ವಿಚಾರವಲ್ಲ ಎಂದು ಆತಂರಿಕಡ ಮಾಹಿತಿಯಿಂದ ಗೊತ್ತಾಗಿದೆ.