suddibindu.in

ಕಾರವಾರ : ಬಂಗಾಳ ಕೊಲ್ಲಿ ಸೈಕ್ಲೋನ್ ಎಫೆಕ್ಟ್ ಹಿನ್ನಲೆಯಲ್ಲಿ ಅರಬ್ಬೀ ಸಮುದ್ರದಲ್ಲೂ ಹೆಚ್ಚಿದ ಅಲೆಗಳ ಅಬ್ಬರ ಜೋರಾಗಿದೆ. ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಅಲೆಗಳ ಅಬ್ಬರ ಹೆಚ್ಚಿದ ಹಿನ್ನಲೆ ಪ್ರವಾಸಿಗರಿಗೆ ನೀರಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ ಚಂಡಮಾರುತದ ಬಗ್ಗೆ ಹವಮಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಕಡಲತೀರದಲ್ಲಿ ಲೈಫ್‌ಗಾರ್ಡ್ ಕಟ್ಟೆಚ್ಚರವಹಿಸಲಾಗಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ನೀರಿಗಿಳಿಯದಂತೆ ಲೈಫ್‌ಗಾರ್ಡ್ಸ್ ಸಿಬ್ಬಂದಿಗಳು ಎಚ್ಚರಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ವಿದೆ. ಘಟ್ಟದ ಮೇಲಿನ ಕೆಲ ತಾಲ್ಲೂಕುಗಳಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆ ಉಂಟಾಗಿದೆ.ಕರಾವಳಿ ತಾಲ್ಲೂಕುಗಳಲ್ಲಿ ಮೋಡ ಬಿಸಿಲು ವಾತಾವರಣ ಮುಂದುವರೆದಿದೆ.

ಅಸ್ವಸ್ಥವಾಗಿ ಬಿದ್ದ ಆಮೆಯನ್ನು ರಕ್ಷಣೆ
ಕುಮಟಾ: ತಾಲೂಕಿನ ಬಾಡದ ಗುಡೇಅಂಗಡಿಯ ಕಡಲ ತೀರದಲ್ಲಿ ಅಸ್ವಸ್ಥವಾಗಿ ಬಿದ್ದ ಆಮೆಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿದ್ದಾರೆ. ಮೀನುಗಾರರ ಬಲೆಗೆ ಸಿಲುಕಿಯೋ ಅಥವಾ ಇನ್ಯಾವುದೊ ಕಾರಣಕ್ಕೆ ಅಳಿವಿನ ಅಂಚಿನಲ್ಲಿರುವ ಆಮೆಯೊಂದು ತನ್ನ ಬಲಭಾಗದ ರೆಕ್ಕೆ ಕತ್ತರಿಸಿಕೊಂಡು ಸಮುದ್ರದಲ್ಲಿ ಈಜಲಾಗದೇ ಕಡಲ ತೀರದಲ್ಲಿ ಅಸ್ವಸ್ಥಗೊಂಡು ಮಲಗಿತ್ತು. ಇದನ್ನು ಗಮನಿಸಿದ ಸ್ಥಳೀಯರಾದ ವಸಂತ ನಾಯ್ಕ ಅವರು ಈ ಆಮೆಯನ್ನು ಮರಳಿ ಸಮುದ್ರಕ್ಕೆ ಬಿಡಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಆಮೆಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ತಮ್ಮ ಕುಮಟಾದ ಕಚೇರಿಗೆ ಸಾಗಿಸಿ, ಕುಂದಾಪುರದಿಂದ ವೈದ್ಯರನ್ನು ಕರೆಯಿಸಿ, ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ. ಆಮೆಯ ಆರೈಕೆ ಮಾಡಿ, ನೀರಿನಲ್ಲಿ ಈಜುವ ಸಾಮರ್ಥ್ಯ ಬಂದ ಮೇಲೆ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಕಾರುಗಳ ನಡುವೆ ಅಪಘಾತ
ಕಾರವಾರ ತಾಲೂಕಿನ ಅಸ್ನೋಟಿಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕ ಸಂಭವಿಸಿ ಕಾರಿಗಳು ಜಖಂ ಆಗಿದ್ದು, ಸವಾರರಿಗೆ ಗಂಭೀರ ಗಾಯವಾಗಿದೆ. ಗಜಾನನ ಗಾಂವಕರ ಪತ್ನಿ ಹಾಗೂ ಸಂಬಂಧಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಗಾಯಗೊಂಡವರನ್ನ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಶಾಸಕಿ ರೂಪಾಲಿ ಮೊಮ್ಮಗನ ನಾಮಕರಣ
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಕಾರವಾರ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರ ಮೊಮ್ಮಗನ ನಾಮಕರಣ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇತು. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ, ಆಶೀರ್ವದಿಸಿದರು.

ರಾಜಕೀಯವಾಗಿ ನಾಮಧಾರಿ ನಾಯಕರನ್ನ ಮುಗಿಸುವ ಪ್ರಯತ್ನ ನಡೆಯುತ್ತಿದೆ.
ಜಿಲ್ಲೆಯ ನಾಮಧಾರಿ ನಾಯಕರನ್ನು ಮುಗಿಸಲು ಜಿಲ್ಲೆಯ ಕಾಂಗ್ರೆಸ್ ನಾಯಕರೇ ಪ್ರಯತ್ನಿಸುತ್ತಿದ್ದಾರೆ ಎಂದು ಈಡಿಗ ಮಹಾ ಮಂಡಳದ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ. ಅವರು ಇಂದು ಕಾರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಮ್ಮ ಸಮುದಾಯನಾಯಕರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಜೂ. ೯ಕ್ಕೆ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು ಇದರಲ್ಲಿ ನಾಮಧಾರಿ ಸಮುದಾಯ ನಾಯಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದರು.ಜಿಲ್ಲೆಯಲ್ಲಿ ದಶಕಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸಿದ‌ ನಾಯಕರಿದ್ದಾರೆ ಅವರನ್ನ ಗುರುತಿಸಿ ಅವಕಾಶ ನೀಡಬೇಕು ಅಂದ್ರು..