ಕಾರವಾರ : ಸ್ಥಳೀಯ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಮಾಜಿ ಶಾಸಕರಾಗಿರುವ ಸತೀಶ ಸೈಲ್ ಯಾವಾಗಲ್ಲೂ ಮಧ್ಯ ಸೇವನೆ ಮಾಡಿಕೊಂಡೆ ಇರುತ್ತಾರೆ ಎಂದು ಆರೋಪಿಸಿದ್ದು, ಆರೋಪದ ಬಳಿ ಸತೀಶ ಸೈಲ್ ಅವರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ಪ್ರಾಥಮಿಕ ವರದಿಯಲ್ಲಿ ಸೈಲ್ ಮಧ್ಯಸೇವನೆ ಮಾಡದೆ ಇರುವ ಬಗ್ಗೆ ವರದಿಯಲ್ಲಿ ಪ್ರಕಟವಾಗಿದೆ.

ನಿನ್ನೆ ಶುಕ್ರವಾರ ಮಾಜಾಳಿ ಗ್ರಾಮ ಪಂಚಾಯತ ಪಿಡಿಓ ಬದಲಾವಣೆ ಕುರಿತಾಗಿ ಮಾಜಿ ಶಾಸಕ ಸತೀಶ ಸೈಲ್ ಹಾಗೂ ಮಾಜಾಳಿ ಗ್ರಾಮಸ್ಥರು ಜಿಲ್ಲಾ ಪಂಚಾಯತ ಸಿಇಓ ಅವರ ಬಳಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರು ಕೂಡ ಸಿಇಓ ಕಚೇರಿಕೆ ಆಗಮಿಸಿದ್ದು ಈ ವೇಳೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಗಲಾಟೆ ಉಂಟಾಗಿತ್ತು.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆ ಶಾಸಕಿ ರೂಪಾಲಿ ನಾಯ್ಕ ಬಹಿರಂಗವಾಗಿಯೇ ಸತೀಶ್ ಸೈಲ್ ಅವರು ಕುಡಿದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ದರು, ಅಷ್ಟೆ ಅಲ್ಲದೆ ಮಾಧ್ಯಮದವರಿಗೂ ಕೂಡ ಹೇಳಿಕೆ ನೀಡುವ ವೇಳೆ ಸೈಲ್ ಕುಡಿದುಕೊಂಡು ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಬಳಿಕ ಸತೀಶ ಸೈಲ್ ನಗರದ ಕ್ರಿಮ್ಸ್ ಗೆ ತೆರಳಿ ವೈದರಿಂದ ಸ್ವಯಂ ತಪಾಸಣೆಗೆ ಒಳಾಗಿದ್ದರು, ಸೈಲ್ ಅವರನ್ನ ತಪಾಸಣೆ‌ ಮಾಡಿದ ಬಳಿಕ ವೈದ್ಯರ ಪ್ರಾಥಮಿಕ ವರದಿಯಲ್ಲಿ ಅವರು ಮಧ್ಯಸೇವನೆ ಮಾಡಿಲ್ಲ ಎನ್ನುವ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಪ್ರಕಟವಾಗಿದೆ‌‌.
ಇನ್ನೂ ಅವರ ರಕ್ತವನ್ನ ಹೆಚ್ಚಿನ ತಪಾಸಣೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನೂ ಕೆಲ ದಿನಗಳಲ್ಲಿ ಆ ವರದಿ ಸತೀಶ ಸೈಲ್ ಅವರ ಕೈ ಸೆರಲಿದ್ದೆ‌,

ಶಾಸಕಿ ಆರೋಪ ಸುಳ್ಳು


ಸತೀಶ ಸೈಲ್ ಮಧ್ಯಸೇವನೆ ಮಾಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಮಾಡಿರುವ ಆರೋಪ ಇದೀಗ ಕ್ರಿಮ್ಸ್ ನ ವೈದ್ಯರ ಪ್ರಾಥಮಿಕ ತಪಾಸಣೆಯಿಂದ ಸುಳ್ಳು ಎನ್ನುವುದು ಕಂಡುಬಂದಿದ್ದು, ಅವರ ಈ ಆರೋಪದ ಬಗ್ಗೆ ಮಾಜಿ ಶಾಸಕರು ಮುಂದಿನ ದಿನದಲ್ಲಿ ಯಾವ ಹೋರಾಟಕ್ಕೆ ಇಳಿಯಲಿದ್ದಾರೆ ಎನ್ನುವುದು ಮಂಗಳೂರು ಆಸ್ಪತ್ರೆಯಿಂದ ವರದಿ ಬಂದ ಬಳಿಕವಷ್ಟೆ ಗೋತ್ತಾಗಬೇಕಿದೆ.