ಸುದ್ದಿಬಿಂದು ಬ್ಯೂರೋ
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಬೀಚ್‌ನಲ್ಲಿ ಈ ಹಿಂದೆ ಹಾಕಲಾಗಿದ್ದ ವೀರ ಸಾರ್ವಕರ್ ವೃತ್ತದ ನಾಮಫಲಕ ಮತ್ತು ಭಗವಧ್ವಜದ ಕಟ್ಟೆ ತೆರವುಗೊಳಿಸಿರುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಗ್ರಾ.ಪಂ ಸದಸ್ಯರು ತೆಂಗಿನಗುಂಡಿ ಗ್ರಾ.ಪಂ.ಎದುರು ಪ್ರತಿಭಟನೆ ನಡೆಸಿ ವಾಪಸ್‌ ಕಟ್ಟೆಯನ್ನ ಅದೆ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಘಟನೆ ನಡೆದಿದೆ.

ಭಟ್ಕಳ್ ತೆಂಗಿನಗುಡಿಯಲ್ಲಿ ಅನೇಕ‌ದಿನಗಳ‌ ಹಿಂದೆ ವೀರ ಸಾವರ್ಕರ್ ವೃತ್ತವನ್ನ ನಿರ್ಮಿಸಿ ಭಗವಧ್ವಜವನ್ನ ಹಾಕಲಾಗಿತ್ತು. ಪಂಚಾಯತ್ ನಲ್ಲಿ ಈ ಹಿಂದೆ ವೀರ ಸಾವರ್ಕರ್ ನಾಮಫಲಕ ಅಳವಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಈಗ ಏಕಾಏಕಿ ಜೆಸಿಬಿ ಬಳಸಿ ನಾಮಫಲಕ, ಕಟ್ಟೆ ಸಹಿತ ಭಗವಾಧ್ವಜ ಹಾಕಿದ್ದ ಕಂಬ ತೆರವುಗೊಳಲಾಗಿದೆ. ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಗೋವಿಂದ್ ನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ ಹಾಗೂ ಪಂಚಾಯತ್ ಸದಸ್ಯರು ಪಂಚಾಯತ ಎದುರು ಪ್ರತಿಭಟನೆ‌ ನಡೆಸಿ ಪಿಡಿಓ‌ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:-ಸೂರಜ್‌ ನಾಯ್ಕ ಸೋನಿಗೆ ಶುಕ್ರದೆಸೆ

ಇದರಿಂದಾಗಿ ಕೆಲ‌ಗಂಟೆಗಳ‌‌‌ ಕಾಲ‌‌ ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನಚಕಮಕಿ‌ ಸಹ ಉಂಟಾಗುವಂತಾಗುವಂತಾಯಿತು. ಪೊಲೀಸರು ಎಷ್ಟೆ ಸಮಧಾನ ಮಾಡಲು ಮುಂದಾದರು ಕೂಡ‌ ಪ್ರತಿಭಟನಾಕಾರರು ಯಾವುದನ್ನು ಲೆಕ್ಕಿಸಲಿಲ್ಲ.‌ಅದೆ‌‌‌ ಜಾಗದಲ್ಲಿ ವೀರ್ ಸಾವರ್ಕರ್ ಅವರ ಕಟ್ಟೆ ಕಟ್ಟಿಯೇ ಸಿದ್ದ ಎದ್ದು ಪಟ್ಟು ಹಿಡಿದ್ದಿದ್ದರು. ಇದರಿಂದಾಗಿ ಕೆಲಸ‌‌ ಸಮಯ ಸ್ಥಳದಲ್ಲಿ‌ ಬೀಗುವಿನ ವಾತಾವರಣ ಕೂಡ ಉಂಟಾಗಿತ್ತು.‌ಬಳಿಕ ಅರ್ಧ ಗಂಟೆಯಲ್ಲಿ‌ ಅದೆ ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಧ್ವಜ ಕಟ್ಟೆಯನ್ನ ನಿರ್ಮಾಣ ‌ಮಾಡಿದ್ದಾರೆ. ಸದ್ಯ ಈ ಧ್ವಜ ಕಟ್ಟೆ ವಿವಾಧ ತಣ್ಣಗಾಗಿದ್ದು,‌ ಒಂದು ವೇಳೆ ಕಟ್ಟೆ ತೆರವಿಗೆ ಮುಂದಾದರೆ ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರು ಸಿಡಿದೇಳುವ ‌ಸಾಧ್ಯತೆ‌‌ ಇದೆ ಎನ್ನಲಾಗುತ್ತಿದೆ.