suddibindu.in
Karwar :ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ‌ ಅಬ್ಬರ ಜೋರಾಗಿದ್ದು ಅರಬ್ಬೀ ಸಮುದ್ರದಲ್ಲಿ ಭಾರೀ ಗಾತ್ರದ ಕಡಲ ಅಲೆಗಳು ಸಮುದ್ರದ ತೀರಕ್ಕೆ ಅಪ್ಪಳಿಸುತ್ತಿದ್ದು, ಕಾರವಾರದ ದೇವಭಾಗದ ಜಂಗಲ್ ರೆಸಾರ್ಟ್‌ಗೆ (Devbhaga Resort) ಸೇರಿದ 4 ಕಾಟೇಜ್‌ಗಳನ್ನ ಕಡಲ‌‌ ಅಲೆ ನುಂಗಿ ಹಾಕಿದ್ದು ಕೋಟ್ಯಾಂತರ ರೂಪಾಯಿ ಹಾನಿ ಉಂಟಾಗಿದೆ.

ಕಾರವಾರ ತಾಲೂಕಿನ ದೇವಭಾಗ ಕಡಲ ತೀರಕ್ಕೆ ರಣಭೀಕರ ಅಲೆ ಅಪ್ಪಳಿಸಿದ ಪರಿಣಾಮ ಕಡಲ ತೀರದ ಅಂಚಿನಲ್ಲಿರುವ ನಾಲ್ಕು ಕಾಟೇಜ್‌ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಕೋಟ್ಯಂತರ ರೂಪಾಯಿ ಹಾನಿ ಉಂಟಾಗಿದೆ. ಕಾಟೇಜ್‌ಗಳ ಕೊತೆಗೆ ಕಡಲತೀರದಲ್ಲಿ ಇದ್ದ ನೂರಾರು ಗಿಡಮರಗಳು ಅಲೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ. ದೇವಭಾಗ ಕಡಲತೀರದಲ್ಲಿ ಒಟ್ಟು 18 ಕಾಟೇಜ್‌ಗಳಿವೆ. ಭಾರಿ ಕಡಲ ಅಲೆಯ ಅಬ್ಬರಕ್ಕೆ ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ನೆಲಸಮವಾಗಿದೆ. ಇದರಲ್ಲಿ ತೀರಪ್ರದೇಶಕ್ಕೆ ಹೊಂದಿಕೊಂಡಿದ್ದ ಕಾಟೇಜ್‌ಗಳಿಗೆ ಹಾನಿ ಉಂಟಾಗಿದೆ.

ಇದನ್ನೂ ಓದಿ

ಇಲ್ಲಿನ ರೆಸಾರ್ಟ್‌ಗಳಿಗೆ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದಲ್ಲೂ ಸಾಕಷ್ಟು ಪ್ರವಾಸಿಗು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಉಂಟಾಗುತ್ತಿರುವುದರಿಂದ ಹಾಗೂ ಕಡಲ ಅಲೆಯ ಅಬ್ಬರ ಜೋರಾಗಿದ್ದ ಕಾರಣ ಕಡಲ ಅಂಚಿನಲ್ಲಿದ್ದ ಈಗ ನೆಲಸಮವಾಗಿರುವ ಈ ಕಾಟೇಜ್‌‌ಗಳಲ್ಲಿ ಯಾವ ಪ್ರವಾಸಿಗರಿಗೂ ರೆಸಾರ್ಟ್ ಸಿಬ್ಬಂದಿಗಳು ಈ ನಾಲ್ಕು ಕಾಟೇಜ್‌ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಭಾರೀ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ.