suddibindu.in
ಹಾವೇರಿ : ಒಕ್ಕಲಿಗ ಸ್ವಾಮಿಜಿಯಿಂದ ಸಿಎಂ ಬದಲಾವಣೆ ಹೇಳಿಕೆ ವಿಚಾರದ ಬೆನ್ನಲ್ಲೆ ಇದೀಗ ಈಡೀಗ ಬಿಲ್ಲವ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಪ್ರಣಾವನಂದ ಸ್ವಾಮಿ Pravananda ಸಿಎಂ ಹುದ್ದೆಗೆ ಬಿ ಕೆ ಹರಿಪ್ರಸಾದ್ ಸಮರ್ಥರಾಗಿದ್ದಾರೆ. ಒಂದು ವೇಳೆ ಅವರಿಗೆ ಸಿಎಂ ಸ್ಥಾನ ನೀಡು ಸಾಧ್ಯವಾಗದೆ ಇದ್ದರೆ ಹರಿಪ್ರಸಾದ್ ಅವರನ್ನ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಸ್ವಾಮೀಜಿ ಕಾಂಗ್ರೇಸ್ ನಾಯಕರನ್ನ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತ್ನಾಡಿದ ಪ್ರಣಾವನಂದ ಸ್ವಾಮಿಜಿ ಅವರು ಕಾಂಗ್ರೇಸ್ ಸರಕಾರದಲ್ಲಿ ಈಡೀಗ ಸಮುದಾಯದಿಂದ ಎರಡು ಸಚಿವ ಸ್ಥಾನ ಕೇಳಲಾಗಿತ್ತು, ಆದರೆ ಅದು ನೀಡಿಲ್ಲ.ರಾಜ್ಯದಲ್ಲಿ ಈಡೀಗರಿಗೆ (ನಾಮಧಾರಿ,ಬಿಲ್ಲವ) ಸಮಾಜಕ್ಕೆ ಅನ್ಯಾಯವಾಗಿದೆ. ಬಿ ಕೆ ಹರಿಪ್ರಸಾದ್ ಅವರು ಕಾಂಗ್ರೇಸ್ ಸಂಘಟನೆಯಲ್ಲಿ ಕೇಂದ್ರಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಕಾಲದಿಂದಲ್ಲೂ ಇದ್ದವರು ಮೊದಲ ಬಾರಿಗೆ ಅವರನ್ನ ಸಚಿವ ಸ್ಥಾನ ನೀಡುವ ಎಲ್ಲಾ ಅವಕಾಶಗಳು ಇದ್ದರೂ ಕೈ ಬಿಡಲಾಗಿದೆ. ಹೀಗಾಗಿ ಸಚಿವ ಸಂಪೂಟದಲ್ಲಿ ಬದಲಾವಣೆ ಆದಲ್ಲಿ ಅವರನ್ನ ಸಿ ಎಂ ಸ್ಥಾನ ನೀಡಬೇಕು ಒಂದು ವೇಳೆ ಸಿಎಂ ಸ್ಥಾನ ಕೊಡದಿದ್ರೆ ಡಿಸಿಎಂ ಮಾಡಬೇಕು ಹರಿಪ್ರಸಾದ್ ಮುಖ್ಯಮಂತ್ರಿ ಆಗುವುದಕ್ಕೆ ಸಮರ್ಥ ನಾಯಕ, ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ, ಪರಿಷತ್ ವಿಪಕ್ಷ ನಾಯಕರಾಗಿದ್ರು, ವಿಪಕ್ಷ ನಾಯಕರಾದವರನ್ನ ಸಿಎಂ ಮಾಡಬೇಕಿತ್ತು. ಸಿಎಂ ಆಗುವುದಕ್ಕೆ ಹರಿಪ್ರಸಾದ ಯೋಗ್ಯವಾದ ವ್ಯಕ್ತಿ. ಕಾಂಗ್ರೆಸ್ ಸರಕಾರ ಬಂದ ಮೇಲೆ ನಮ್ಮ ಸಮಾಜಕ್ಕೆ ಏನು ಕೊಟ್ಟಿಲ್ಲ. ಚುನಾವಣೆಯಲ್ಲಿ ಈಡಿಗ, ನಾಮದಾರಿ, ಬಿಲ್ಲವ ಸಮಾಜ ಕಾಂಗ್ರೆಸ್ ಪರ ನಿಂತಿತ್ತು. ಆದರೆ ಅದರ ಲಾಭ ಪಡೆದ ನಂತರದಲ್ಲಿ ಸರಿಯಾಗಿ ಕೈ ಹಿಡಿಯಲಿಲ್ಲ. ಕಾಂಗ್ರೆಸ್ ಸರಕಾರದ ಮೇಲೆ ಈಡೀಗರಿಗೆ ಇರುವ ಅಸಮಧಾನ ಹೊಗಲಾಡಿಸಬೇಕಾದರೆ ಹರಿಪ್ರಸಾದ್ ಅವರನ್ನ ಸಿ ಎಂ ಇಲ್ಲವೇ ಡಿಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ
- ಒಳ್ಳೆ ದಿನ ನೋಡಿ ಹೆಬ್ಬಾರ್ ಕಾಂಗ್ರೇಸ್ಗೆ ಬರತ್ತಾರೆ : ಸಚಿವ ಮಂಕಾಳು ವೈದ್ಯ
- ಬಿ ಕೆ ಹರಿಪ್ರಸಾದ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
- ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಗಜಾನನ ಗೌಡ ಶವ ಪತ್ತೆ
ಈ ವಿಚಾರವಾಗಿ ಅತೀ ಶೀಘ್ರವಾಗಿ ದೆಹಲಿಗೆ ತೆರಳಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಪ್ರಮುಖ ನಾಯಕರನ್ನ ಭೇಟಿ ಮಾಡಿ ಮಾತು ನಡೆಸಲಾಗುವುದು ಅಂತಾ ಪ್ರಣಾವನಂದ ಸ್ವಾಮಿಜಿ ತಿಳಿಸಿದ್ದಾರೆ.