rescue of tourists who were drowning in the sea
suddibindu.in
Karwar: ಕಾರವಾರ :ಸಮುದ್ರದಲ್ಲಿ ಈಜಲು ತೆರಳಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು(Tourists) ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೇ ಬೀಚ್ (Kudlay Beach) ನಡೆದಿದೆ.
ಬೆಂಗಳೂರು ಮೂಲದ ಸ್ಮಿತಾ ರವಿಚಂದ್ರನ್ (23) ನಿಹಾರಿಕಾ ಗಿರಿ (22) ಪವಿತ್ರ ಸುಂದರ್ (22) ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು.(Bangalore Tourists) ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಇವರು ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.
ಇದನ್ನೂ ಓದಿ
- ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಮಂಗಳೂರಿಗೆ ಸ್ಥಳಾಂತರಿಸುವ ಕ್ರಮ ಸರಿಯಲ್ಲ
- ಅನಂತಮೂರ್ತಿ ಹೆಗಡೆ ಪ್ರತಿಭಟನೆಗೆ ಸ್ಥಳದಲ್ಲೆ ಆದೇಶಿಸಿದ ಡಿಸಿ
- ಭಾರತ್ ಸೈನ್ಯಕ್ಕೆ ಬೆಚ್ಚಿಬಿದ್ದ ಪಾಕ್ : 5 ಸಾವಿರ ಸೈನಿಕರ ರಾಜೀನಾಮೆ
ಇದನ್ನ ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ ತಕ್ಷಣ ಧಾವಿಸಿ ಮುಳುಗಡೆಯಾಗುತ್ತಿದ್ದ ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾರೆ.