suddibindu.in
ಬೆಂಗಳೂರು:2024ರ ಲೋಕಸಭಾ ಚುನಾವಣೆಯ ಉತ್ತರಕನ್ನಡ ಕ್ಷೇತ್ರದ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾಗಿ ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಹೆಸರನ್ನ ಪಕ್ಷದ ಹೈಕಮಾಂಡ ಘೋಷಣೆ ಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿಯ ಎರಡು ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಈ ಭಾರಿ ಕಾಂಗ್ರೆಸ್ ನಿಂದ ನ್ಯಾಯವಾಧಿಗಳಾದ ರವಿಂದ್ರನಾಥ ನಾಯ್ಕ ಹಾಗೂ ಸಿದ್ದಾಪುರ ಮೂಲದ ಕಾರವಾರದಲ್ಲಿ ನ್ಯಾಯವಾಧಿಗಳಾಗಿರುವ ಜಿ ಟಿ ನಾಯ್ಕ ಸೇರಿದಂತೆ ಪ್ರಮುಖರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು.ಆದರೆ ಪಕ್ಷದ ಹೈಕಮಾಂಡ ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕಿಳಿಸಿದೆ. ಸದ್ಯ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೆ ಇರುವದು ಅಭ್ಯರ್ಥಿಗೆ ದೊಡ್ಡಮಟ್ಟದಲ್ಲಿ ಸಹಾಯವಾಗಲಿದೆ.
- ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ
- ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಮಕ್ಕಳ ರಕ್ಷಣೆ:ಗೋಕರ್ಣದಲ್ಲಿ ಅಚ್ಚರಿ ಘಟನೆ
- ನಿತ್ಯವೂ ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಕೆಎಸ್ಆರ್ಟಿಸಿ ಬಸ್ : ಪ್ರಯಾಣಿಕರು ಹೈರಾಣ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೇ ಇರುವ ಖಾನಾಪುರದ ಶಾಸಕಿಯಾಗಿದ್ದ ನಿಂಬಾಳ್ಕರ್ ಅವರಿಗೆ ಕ್ಷೇತ್ರದ ಒಳಹೊರಗುಗಳು ಗೊತ್ತಿವೆ. ಖಾನಾಪುರ, ಕಿತ್ತೂರು ಹಾಗು ಉತ್ತರ ಕನ್ನಡ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಾ ಸಮುದಾಯದ ಮತಗಳೂ ಗಣನೀಯ ಪ್ರಮಾಣದಲ್ಲಿದೆ. ಇನ್ನೂ ಬ್ರಾಹ್ಮಣ ಮತ್ತು ನಾಮಧಾರಿಗಳು (ಈಡಿಗ, ಬಿಲ್ಲವ) ಹೆಚ್ಚುಕಡಿಮೆ ಸಮ ಸಂಖ್ಯೆಯಲ್ಲಿದ್ದು, ಶೇ. 50 ಕ್ಕೂ ಹೆಚ್ಚು ಜನಸಂಖ್ಯೆ ಈ ಸಮುದಾಯಗಳದ್ದೇ ಆಗಿದ್ದು, ಇದರ ಜೊತೆಗೆ ಎಸ್ಸಿ ಎಸ್ಟಿ ಹಾಗೂ ಅಲ್ಪ ಸಂಖ್ಯಾತ ಮತದಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲಾ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕಿಳಿಸಿದೆ.