suddibindu.in
Karwar:ಕಾರವಾರ: ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ ಇದೀಗ ಜೆಡಿಎಸ್‌ನ ಸಿ ಎಂ ಇಬ್ರಾಹಿಂ(CM Ibrahim) ಬಣ ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ (Congress) ಅಭ್ಯರ್ಥಿಯನ್ನ ಬೆಂಬಲಿಸಲು ಮುಂದಾಗಿದೆ..

ರಾಜ್ಯದಲ್ಲಿ ಜೆಡಿಎಸ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಎರಡು ಬಣಗಳಾಗಿದ್ದು,ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ ಮುನಿಸಿಕೊಂಡಿದ್ದು, ಕುಮಾರ ಸ್ವಾಮಿ ಅವರ ನಡೆಯಿಂದ ಹೊರಬಂದಿದ್ದು, ಪಕ್ಷದ ಚಿಹ್ನಗೆಗಾಗಿ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ.

ಇದನ್ನು ಓದಿ

ಇನ್ನೂ ಸಿ ಎಂ ಇಬ್ರಾಹಿಂ ಅವರ ಜೊತೆಯಲ್ಲಿ ಗುರುತಿಸಿಕೊಂಡ ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನಾಗೇಶ ನಾಯ್ಕ ಕಾಗಲ್, ಯಲ್ಲಾಪುರ ತಾಲೂಕಾಧ್ಯಕ್ಷ ಬೆನಿತ್ ಎ ಸಿದ್ದಿ, ಮುಂಡಗೋಡ ಹಾಗೂ ಬನವಾಸಿ ಭಾಗದ ಅನೇಕ ಪ್ರಮುಖರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸಲಿದ್ದಾರೆ‌. ಈ ಸಂಬಂಧ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್‌ ಹಾಗೂ ಜಿಲ್ಲೆಯ ಕಾಂಗ್ರೆಸ್ ಪ್ರಮುಖರೊಂದಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಮಮೋಗೆರ, ಆರ್ ಎಚ್ ನಾಯ್ಕ, ಕಾಗಾಲ್ ಸೇರಿದಂತೆ ಹಲವು ಸಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಅವರು ಡಾ. ನಾಗೇಶ ನಾಯ್ಕ ಅವರ ಮನೆಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದಾರೆ.

ಇನ್ನೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ ಅವರು ಉತ್ತರಕನ್ನಡ ಹಾಗೂ ಉತ್ತರ ಕರ್ನಾಟ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದ್ದು, ಏಪ್ರಿಲ್ 27ರಂದು ಸಿಎಂ ಉತ್ತರಕನ್ನಡದಲ್ಲೂ ಕೂಡ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.