ಸುದ್ದಿಬಿಂದು ಬ್ಯೂರೋ
ಕುಮಟಾ: ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ (Congress President) ಯುವ ಮುಖಂಡ ಭುವನ ಭಾಗ್ವತ್ ಅವರನ್ನ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(KPCC President DK Shivakumarಅವರು ಆದೇಶ ಹೊರಡಿಸಿದ್ದಾರೆ.

ಭುವನ್ ಭಾಗ್ವತ್ ಅವರು ಯುವ ರಾಜಕಾರಣಿಯಾಗಿ, ಸಹಕಾರಿ ಕ್ಷೇತ್ರದ.(Co-operative sector) ಸಾಧಕರ ಸಾಲಿನಲ್ಲಿ ಭುವನ್ ಮುನ್ನಡೆಯುತ್ತಿದ್ದಾರೆ. ಇವರು ತಮ್ಮ 21ನೇ ವಯಸ್ಸಿನಲ್ಲಿಯೇ ಪಿ.ಎಲ್‌.ಡಿ ಬ್ಯಾಂಕ್ (PLD bank) ಅಧ್ಯಕ್ಷರಾಗಿ ಅತ್ಯಂತ ಕಿರಿಯ ವಯಸ್ಸಿನ ಸಹಕಾರಿ ಅಧ್ಯಕ್ಷರಾಗಿ ಗಮನ ಸೆಳೆದಿದ್ದಾರೆ.ತಮ್ಮ 23 ನೇ ವಯಸ್ಸಿನಲ್ಲಿಯೇ ಕರ್ನಾಟಕಾ ಸ್ಟೇಟ್ ಲ್ಯಾಂಡ್ ಡೆವಲಪ್ಟೆಂಟ್ ಬ್ಯಾಂಕ್ (Karnataka State Land Development Bank) (ಕಸ್ಟಾರ್ಡ ಬ್ಯಾಂಕ್)ನ ಚುನಾವಣೆಗೆ ಸ್ಪರ್ಧಿಸಿ ಅಂದಿನ ಭಟ್ಕಳ ಶಾಸಕರಾಗಿದ್ದ ಸುನೀಲ್ ನಾಯ್ಕ ವಿರುದ್ಧ ಪ್ರಭಲ ಪೈಪೋಟಿ ನೀಡಿ ಗಮನ ಸೆಳೆದಿದ್ದು, ತಮ್ಮ ಪ್ರಾಭಲ್ಯ ತೋರಿದ್ದರು.

ಇದನ್ನೂ ಓದಿ:-ಸೂರಜ್ ನಾಯ್ಕ ಸೋನಿಗೆ ಶುಕ್ರದೆಸೆ

ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕನಾಗಿ ಕಾರ್ಯನಿರ್ವಹಿಸಿ ‘ಯಶಸ್ವಿಯಾದವರು. ಎರಡನೇ ಬಾರಿಗೆ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗುವ ಮೂಲಕ ಗಮನಸೆಳೆದ ಜನಾನುರಾಗಿಯಾಗಿದ್ದಾರೆ,
ಸಹಕಾರಿ ರತ್ನ ದಿ. ಆರ್.ಎಸ್.ಭಾಗ್ವತ್ ಅವರ ಮೊಮ್ಮಗನಾಗಿರುವ ಭುವನ್ ಭಾಗ್ವತ್ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ,

2023ರ ಚುನಾವಣೆಯಲ್ಲಿ ಇವರು ಕುಮಟಾ ಕ್ಷೇತ್ರದ ಪ್ರಭಲ ಆಕಾಂಕ್ಷಿ ಸಹ ಆಗಿದ್ದರು. ಇದೀಗ ಇವರನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ‘ಸಂತಸ ಮೂಡಿಸಿದೆ. ಭುವನ ಶ್ರೀಧರ ಭಾಗ್ವತ್ ತಕ್ಷಣದಿಂದ ಕುಮಟಾ ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗುವಂತೆ ಅವರು ಸೂಚಿಸಿದ್ದಾರೆ