ಸುದ್ದಿಬಿಂದು ಬ್ಯೂರೋ
ಶಿರಸಿ : ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಅವರು ವಯೋಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ
.

ಮೃತರಿಗೆ 79ವರ್ಷ ವಯಸ್ಸಾಗಿದ್ದು, ಅವರು ರಾಜಕೀಯ ಕ್ಷೇತ್ರದ ಜೊತೆಗೆ ಸಹಕರಾರಿ ಕ್ಷೇತ್ರದಲ್ಲಿಯೂ ಸಹ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆ ಜೊತೆಗೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದರು. ಇವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ‌ ಪ್ರಮುಖರು ಹಾಗೂ ಅವರ ಅಪಾರ ಅಭಿಮಾನಿಗಳು ಅಪಾರ‌ ಸಂಖ್ಯೆಯಲ್ಲಿ ಅಂತಿಮ‌ ದರ್ಶನಕ್ಕಾಗಿ ಅವರ ಸ್ವ ಗೃಹ ದತ್ತ ಆಗಮಿಸುತ್ತಿದ್ದಾರೆ.

ಮೃತರು ಪತ್ನಿ,‌ಓರ್ವ‌ ಪುತ್ರ, ಇಬ್ಬರೂ ಪುತ್ರಿಯರು ಸೇರಿ ಅಪಾರ‌ ಸಂಖ್ಯೆಯ ಬಂದು ಬಳಗವನ್ನ ಅಗಲಿದ್ದಾರೆ.