ಸುದ್ದಿಬಿಂದು ಬ್ಯೂರೋ
ಭಟ್ಕಳ
: ಮೂವರು ಅಲೆಯ ಅಬ್ಬರಕ್ಕೆ ಸಿಲುಕ್ಕಿದ್ದು, ಇಬ್ವರನ್ನ ರಕ್ಷಣೆ ಮಾಡಲಾಗಿದ್ದು, ಓರ್ವ ನಾಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.

ಘಟನೆಯಲ್ಲಿ ಸಂತೋಷ ಹುಲಿಗೊಂಡ(19) ಎಂಬಾತ ಕಣ್ಮರೆಯಾಗಿರುವ ಯುವಕನಾಗಿದ್ದಾನೆ. ಈತನ ಜೊತೆಗೆ ಇದ್ದ ಹಸನ್ ಮುಜ್ಜಿಗಿ ಗೌಡರ್( 21) ಹಾಗೂ ಸಂಜೀವ ಹೆಬ್ಬಳ್ಳಿ (20) ಇವರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಕಲಘಟಗಿಯಿಂದ 22ಮಂದಿ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು, ಎನ್ಬಲಾಗಿದೆ. ಸೈಕ್ಲೋನ್ ಎಫೆಕ್ಟ್ ಇರುವ ಕಾರಣ ಪ್ರವಾಸಿಗರು ಸಮದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಲಾಗಿದೆ. ಆದರೆ ಎಲ್ಲವನ್ನ ಲೆಕ್ಕಿಸಿದೆ ಪ್ರವಾಸಿಗರು ಸಮುದ್ರದ ನೀರಿಗೆ ಇಳಿದಿದ್ದಾರೆ.

ಸಮುದ್ರದ ದಡಕ್ಕೆ ಅಪ್ಪಳ್ಳಿಸುತ್ತಿದ್ದ ಆಳೆತ್ತರದ ಕಡಲ ಅಲೆಗಳು ಎಳೆದುಕೊಂಡು ಹೋಗಿದೆ. ರಕ್ಷಣೆ ಮಾಡಲಾಗಿದ್ದ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ನಾಪತ್ತೆಯಾಗಿರುವ ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ.