ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ : ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ದವಾಗಿದ್ದು,ಚುನಾವಣೆ ದಿನಾಂಕ ಘೋಷಣೆಗಾಗಿ ಪಕ್ಷಗಳು ಎದುರು ನೋಡುತ್ತಿದೆ. ಇಂದು ಕೇಂದ್ರ ಚುನಾವಣಾ ಆಯೋಗ ಮಾಧ್ಯಮಗೋಷ್ಠಿಯನ್ನ ಕರೆದಿದ್ದು,ಹೀಗಾಗಿ ಇಂದಿನಿಂದಲ್ಲೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.
ಕೇಂದ್ರ ಚುನಾವಣಾ ಆಯೋಗ ಇಂದು 11-30ಕ್ಕೆ ದೆಹಲಿಯಲ್ಲಿ ಸುದ್ದಿಗೊಷ್ಟಿ ಕರೆಯಲಾಗಿದೆ .ರಾಜ್ಯದ 224ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಮೇ ಮೊದಲ ವಾರದಲ್ಲಿ ಚುನಾವಣೆಯ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೆ ಚುನಾವಣೆಗಾಗಿ ಆಯೋಗ ಎಲ್ಲಾ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ರಾಯಕೀಯ ಪಕ್ಷಗಳು ಹಾಕಿದ್ದ ಬ್ಯಾನರ್ ಗಳನ್ನ ತೆರವು ಮಾಡಿಕೊಳ್ಳಲಾಗಿದೆ.ಇನ್ನೂ ರಾಜ್ಯದ ಎಲ್ಲಾ ಕಡೆಯಲ್ಲಿ ಚುನಾವಣಾ ಅಕ್ರಮ ತಡೆಗಾಗಿ ಚೆಕ್ ಪೊಸ್ಟ್ ಗಳನ್ನ ತೆರೆಯಲಾಗಿದೆ.