ಸುದ್ದಿಬಿಂದು ಬ್ಯೂರೋ
ಹಳಿಯಾಳ
: ತಾಲೂಕಿನ ಗುಂಡೋಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಆವರಣದ ಪಕ್ಕದಲ್ಲಿ ಬೆಳೆದ ವಿಷಕಾರಿ ಬೀಜಗಳನ್ನು ತಿಂದು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಗುಂಡೊಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1, 2 ಮತ್ತು 3ನೇ ತರಗತಿಯ ಸುಮಾರು 10ಕ್ಕೂ ಅಧಿಕ ವಿದ್ಯಾರ್ಥಿಗಳು ಆಟವಾಡುತ್ತಾ ಶಾಲಾ ಆವರಣದ ಪಕ್ಕದಲ್ಲಿದ್ದ ವಿಷಕಾರಿ ಬಳ್ಳಿಯಲ್ಲಿ ಬೆಳೆದ ಹಣ್ಣಿನ ಬೀಜಗಳನ್ನು ಶೇಂಗಾದ ಜೀಜವೆಂದು ಭಾವಿಸಿ ತಿಂದ ಕಾರಣ ವಾಂತಿ ಭೇದಿ ಆರಂಭವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪಾಲಕರು ಸಮೀಪದಲ್ಲಿರುವ ಕಾಳಗಿನಕೊಪ್ಪ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ಬಳಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಆಸ್ಪತ್ರೆಯ ತಜ್ಞ ವೈದ್ಯ ಡಾ. ಗಣೇಶ ಅರಶೀಗೇರಿ ಅವರು ಅನ್ಯಸ್ತಗೊಂಡ ಮಕ್ಕಳಗೆ ಚಿಕಿತ್ಸೆ ನೀಡಿದ್ದು ಬಹುಹೇಶ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಮೂವರು ಮಕ್ಕಳ ಚಿಕಿತ್ಸೆ ಮುಂದುವರೆದಿದ್ದು ಮುನ್ನಚ್ಚರಿಕೆ ಕ್ರಮವಾಗಿ ಎಲ್ಲಾ ಮಕ್ಕಳನ್ನು ದಾಖಲಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಿಷಯ ತಿಆಯುತ್ತಿದ್ದಂತೆಯೇ ಸಿಪಿಐ ಸುರೇಶ ಶಿಂಗೆ, ಪಿಎಸ್ ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ ಐ ಅಮಿನಸಾಬ್ ಅತ್ತಾರ ಹಾಗೂ ಸಿಬ್ಬಂದಿ ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲಾ ಶಿಕ್ಷಕರು, ಚಾಲಕರು ಮತ್ತು ಎಸ್‌ಡಿಎಂಸಿ ಕಮಿಟಿಯ ಸದಸ್ಯರು ಹಾಜರಿದ್ದರು.