ಸುದ್ದಿಬಿಂದು ಬ್ಯೂರೋ
ಕಾರವಾರ
: ಇಲ್ಲಿ‌ನ ರವೀಂದ್ರನಾಥ್ ಕಡಲತೀರದಲ್ಲಿ ಇದೆ ಮೊದಲ ಬಾರಿಗೆ ನೌಕಾನೆಲೆಯಿಂದ ಯೋಗ ದಿನಾಚರಣೆ ಮಾಡಲಾಯಿತು.

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ನೌಕಾನೆಲೆ‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಥ್ ನೀಡಿದ್ದರು. ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ನೌಕಾ ನೆಲೆ ಅಧಿಕಾರಿಗಳಿಂದ ಇದೆ ಮೊದ ಬಾರಿಗೆ ಯೋಗ ದಿನವನ್ನ ಆಚರಣೆ ಮಾಡಲಾಯಿತು.

ನೌಕಾನೆಲೆ ಅಧಿಕಾರಿಗಳು, ಸಿಬ್ಬಂದಿ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಅಧಿಕ ನೌಕಾನೆಲೆ ಸಿಬ್ಬಂದಿಯಿಂದ ಏಕಕಾಲಕ್ಕೆ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಲಾಯಿತು. ಸುಮಾರು 1 ಗಂಟೆಗೂ ಹೆಚ್ಚಿನ ಸಮಯ ಯೋಗ ಮಾಡಲಾಯಿತು.