ಅಂಕೋಲಾ : ಉರಿಗೌಡ ಮತ್ತು ನಂಜೇಗೌಡರ ವಿಚಾರದ ಬಗ್ಗೆ ಹೇಳಿಕೆ ನೀಡಿರುವ ಮುರುಗೇಶ ನಿರಾಣಿ ಸ್ವಪಕ್ಷದವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಇಂದು ರವಿವಾರ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮುರೇಶ ನಿರಾಣಿ ಮಾಧ್ಯಮದವರ ಜೊತೆ ಮಾತನಾಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು, ಅದನ್ನ ಬಿಟ್ಟು ಇದರಲ್ಲಿ ರಾಜಕಾರಣ ಬೇಡ.ನಮ್ಮ ಪಕ್ಷದವರನ್ನ ಸೇರಿಸಿ ಉಳಿದ ಪಕ್ಷದವರಿಗೂ ಇದು ಅನ್ವಯವಾಗತ್ತೆ, ಇದರಲ್ಲಿ ರಾಜಕಾರಣ ಸರಿ ಅಲ್ಲ.

ಉರಿಗೌಡ ಮತ್ತು ನಂಜೇಗೌಡ ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಯುವಕರಿಗೆ ಉದ್ಯೋಗ ನೀಡುವುದರ ಬಗ್ಗೆ, ಕೃಷಿಕರ ಅಭಿವೃದ್ಧಿ ಬಗ್ಗೆ ಚಿಂತನೆ ಇರಬೇಕು. ಸುಮ್ಮನೆ ಟೈಮ್ ಹಾಳು ಮಾಡುವುದರ ಬಗ್ಗೆ ಹೇಳಿಕೆ ನೀಡಬಾರದು ಎಂದು ಸ್ವಪಕ್ಷದವರ ಹೇಳಿಕೆಯನ್ನ ಖಂಡಿಸಿದ ಸಚಿವರ ನಿರಾಣಿ. ಬಸವನಗೌಡ ಯತ್ನಾಳ ಮತ್ತು ಮುರಗೇಶ್ ನಿರಾಣಿ ನಡುವಿನ ಗೊಂದಲ ನೂರಕ್ಕೆ ನೂರರಷ್ಟು ಸರಿ ಹೋಗಿದೆ. ಯತ್ನಾಳ ಕಡೆಯಿಂದ ಈಗ ಏನು ಉತ್ತರ ಬರುತ್ತಿಲ್ಲ, ನಮ್ಮಿಬ್ಬರ ನಡುವೆ ಸರಿ ಹೋಗಿದೆ ಎಂದು ಮುರುಗೇಶ ನಿರಾಣಿ ನಗೆ ಬೀರಿದ್ದಾರೆ‌

ಇನ್ನೂ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಜಾನ್ ಕೂಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ತಪ್ಪು ಮಾಡಿದ್ದರೆ ಖಂಡಿತ ಕಾನೂನು ಕ್ರಮ ಆಗುತ್ತೆ. ನಮ್ಮ ಪೊಲೀಸರು ಅಂತವರ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.