ಕಾರವಾರ : ತಂಝೀಮ್ ಜೊತೆ ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬಿಜೆಪಿಯ ಮಾಜಿ ತಾಲೂಕಾಧ್ಯಕ್ಷ ಶಂಕರ ನಾಯ್ಕ ಆರೋಪಿಸಿದ್ದಾರೆ.
ಅವರು ಇಂದು ರವಿವಾರ ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿ, ಹಾಲಿ ಶಾಸಕರ ವಿರುದ್ಧ ಗಂಭೀರವಾಗಿರುವ ಆರೋಪಗಳನ್ನ ಎಸೆಗಿದ್ದಾರೆ. ಫೇಸ್ ಬುಕ್ ಪಿತಾಮಹ ಎಂದು ಕರ್ನಾಟಕದಲ್ಲಿ ಸುನೀಲ್ ನಾಯ್ಕ ಖ್ಯಾತಿ ಪಡೆದುಕೊಂಡಿದ್ದಾರೆ.
ಸುನೀಲ್ ನಾಯ್ಕ ಹಾಗೂ ಅವರ ಆಪ್ತರು ಸೇರಿಕೊಂಡು ಬಿಜೆಪಿಯ ಹಿರಿಯ ನಾಯಕರ ಹಾಗೂ ಅವರ ಕುಟುಂಬದವನ್ನ ತೆಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾರು ಕೂಡ ಅವರ ವಿರುದ್ಧ ಪ್ರಶ್ನೆ ಮಾಡುವಂತಿಲ್ಲ. ಹೀಗಾಗಿ ಭಟ್ಳಳ ಬಿಜೆಪಿ ಶಾಸಕರ ವರ್ಥನೆಯಿಂದ ಬಿಜೆಪಿ ಕಾರ್ಯಕರ್ತರು ಸಾಯುವಂತಾಗಿದೆ.
ಈ ಶಾಸಕರ ವರ್ಥನೆಯಿಂದಾಗಿ ತಝಿಂನವರು ಶ್ರೀಮಂತರಾಗುತ್ತಿದ್ದಾರೆ. ಬಿಜೆಪಿಯಲ್ಲಿ ಯಾರಿಗೆ ಬೇಕಾದ್ರು ಟಿಕೆಟ್ ನೀಡಲಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸುನೀಲ್ ನಾಯ್ಕ ಅವರಿಗೆ ಪಕ್ಷ ಅವಕಾಶ ಕೊಟ್ಟರೆ ನಾವೇಲ್ಲಾ ಹಿಂದೂತ್ವದ ಅಜೆಂಡಾ ಇರುವವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.