ಸುದ್ದಿಬಿಂದು ಬ್ಯೂರೋ

ಜೋಯಿಡಾ : ಶಾಂತೆ ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಗಳೆ‌ ಠಾಣೆಯೊಳಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳು ಕ್ಷುಲ್ಲಕ ಕಾರಣವೊಂದಕ್ಕೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲಿ ಹೊಡೆದಾಟ, ಬಡಿದಾಟ ಆದಾಗ ಹೋಗಿ ತಪ್ಪಿಸಿ, ಬುದ್ದಿವಾದ ಹೇಳಿ ಬರುವ ಪೊಲೀಸರೆ ಈಗ ಹೊಡೆದಾಡಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಇವರು ಹೊಡೆದಾಡಿಕೊಂಡ ವಿಡಿಯೋ ಠಾಣೆಯಲ್ಲಿನ ಸಿಸಿ ಕ್ಯಾಮರಾಗಳಲ್ಲಿ ಸಹ ಸೆರೆಯಾಗಿದೆಯಂತೆ.

ಇವರು ಹೊಡೆದಾಡಿಕೊಳ್ಳುತ್ತಿರುವುದನ್ನ ಗಮನಿಸಿದ ಠಾಣಾಧಿಕಾರಿ ಮೂವರಿಗೂ ಬುದ್ದಿ ಮಾತು ಹೇಳಿದ್ದಾರೆ. ಬೇರೆ ಯಾರೆ ಆಗಿದ್ದರೂ ಹೊಡೆದಾಡಿಕೊಂಡಿದ್ದರೆ ಇಷ್ಟ ಹೊತ್ತಿಗಾಗಲೆ ಅವರನ್ನ ಠಾಣೆಗೆ ಎಳೆತಂದ್ದು, ಹೊಡೆದಾಡಿಕೊಂಡವರ ವಿರುದ್ದ ಹತ್ತಾರು ಕಲಂ ದಾಖಲಿಸಿ ಬಿಡುತ್ತಿದ್ದರು.

ಶಾಂತಿ ಸುವ್ಯವಸ್ಥೆ ಕಾಪಾಡ ಬೇಕಾದವರೆ ರಕ್ಷಣೆ ಮಾಡಬೇಕಾದ ಸ್ಥಳದಲ್ಲಿ ಹೊಡೆದಾಡಿಕೊಂಡಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು ಎಂದು ಜನ ಪೊಲೀಸರ ಮೇಲೆ ಪ್ರಶ್ನೆ ಮಾಡುವಂತಾಗಿದೆ.