ಸುದ್ದಿಬಿಂದು ಬ್ಯೂರೋ
ಶಿರಸಿ : ಸಾಕಷ್ಟು ‌ಚರ್ಚೆಗೆ ಕಾರಣವಾಗಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಮಾಜಿ ಸಚಿವ ಹಾಗೂ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗೋದು ಬಹುತೇಕ ಡೌಟ್ ಎನ್ನಲಾಗಿದ್ದು, ಅವರ ಬದಲಿಗೆ ಕೇಂದ್ರ ವಿದೇಶಾಂಗ ಸಚಿವರಾಗಿರುವ ಎಸ್ ಜೈ ಶಂಕರ್ ಅವರನ್ನ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದರ ಬೆನ್ನಲೆ ಉತ್ತರಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎನ್ನುವ ಚರ್ಚೆ ಬಿಜೆಪಿ ಕಾರ್ಯಕರ್ತರ ನಡುವೆ ನಡೆಯುತ್ತಿದ್ದು, ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಕೂಡ ಕರ್ನಾಟಕದಿಂದಲೇ ಆಯ್ಕೆಯಾಗಿ ರಾಜ್ಯ ಸಭಾ ಸದಸ್ಯೆ ಆದವರು,ಆದರೆ ಇವರ ಅಭಿವೃದ್ಧಿ ಕಾರ್ಯ ಹೇಳಿಕೊಳ್ಳಲು ನಾಚಿಕೆ ಆಗುತ್ತದೆ.ಇದೀಗ ಮತ್ತೊಬ್ಬ ಹಿಂದಿ ವಾಲಾರನ್ನು ಉತ್ತರಕನ್ನಡ ಜಿಲ್ಲೆಗೆ ತಂದು ಮತ್ತಷ್ಟು ಅಭಿವೃದ್ಧಿ ಹಿನರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜಕೀಯ ಕಾರ್ಯತಂತ್ರ ಏನೆ ಇರಲಿ ಕೆನರಾ ಕ್ಷೇತ್ರಕ್ಕೆ ಜನಪರ‌ ಕಾಳಜಿ ಇರುವ ವ್ಯಕ್ತಿಯನ್ನೆ ಅಭ್ಯರ್ಥಿಯನ್ನಾಗಿಸಬೇಕು.ಹಾಗಾಗಿ ನಾವು ಅನಂತಮೂರ್ತಿ ಹೆಗಡೆಯವರನ್ನ ಬೆಂಬಲಿಸುತ್ತೆವೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಶ್ರಮಿಕ ವರ್ಗದ ಪರ, ಕೃಷಿಕರ ಪರ, ಗಟ್ಟಿ ಧ್ವನಿ ಎತ್ತಿದ್ದ ಏಕೈಕ ವ್ಯಕ್ತಿ ಅನಂತಮೂರ್ತಿ ಹೆಗಡೆ, ಹಾಗಾಗಿ ನಾವು ಅವರನ್ನ ಬೇಸರತ್ತಾಗಿ ಬೆಂಬಲಿಸುತ್ತೆವೆ ಎಂದು ಶಿರಸಿ ಸಹಿತ ಜಿಲ್ಲೆಯ ವಿವಿಧ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಒಟ್ಟಾರೆ ಬಿಜೆಪಿಯ ಚುನಾವಣಾ ರಣತಂತ್ರ ಕಾರ್ಯಕರ್ತರ ನಿದ್ದೆಗೆಡಿಸಿದ್ದು ಸುಳ್ಳಲ್ಲ.