ಸುದ್ದಿಬಿಂದು ಬ್ಯೂರೋ

ಭಟ್ಕಳ : ಉತ್ತರಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಹತ್ತಾರು ಬೈಕ್‌ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ನಾಲ್ವರು ಬೈಕ್ ಕಳ್ಳರನ್ನ ಬಂಧಿಸಿ 15ಬೈಕ್ ಗಳನ್ನ ಮಂಕಿ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಗಸ್ಟ್ 31ರಂದು ಬೆಳಿಗ್ಗಿನ ಜಾವ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕಪ್ಪು ಬಣ್ಣದ ಟಿ.ವಿ.ಎಸ್ ರೈಡರ್ ಮೋಟಾರ್ ಸೈಕಲನ್ನು ನಿಲ್ಲಸದೇ ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ತಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.

ಆರೋಪಿತರಾಗಿರುವ ಕಲಘಟಗಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಹಂಚಿನಾಳ ನಿವಾಸಿ ರವಿಚಂದ್ರ ಶಿವಪ್ಪ ತಳವಾರ, ಸಲ್ಮಾನ ಇಮಾಮ್‌ಸಾಬ್ ತಹಶೀಲ್ದಾರ ಹಾಗೂ ಜಗದೀಶ ಕೋಟೆಪ್ಪ , ಕುಂದಗೋಳ ಇವರೊಂದಿಗೆ ಸೇರಿ ವಿವಿಧ ಜಿಲ್ಲೆಗಳಲ್ಲ. ಸುಮಾರು 14 ಮೋಟಾರ್ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸ ತನಿಖೆಯ ವೇಳೆ ಆರೋಪಿತರು ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ವಿವಿಧೆಡೆಯಲ್ಲಿ ಕಳ್ಳತನ ಮಾಡಿರುವ 15 ಬೈಕ್ ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯ 8ಲಕ್ಷದ 35 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜೈಲಾನಿ ಭಾಷಾಬ್ ಗಂಜಿಗಟ್ಟ ಈತನ ಮೇಲೆ ಕಲಘಟಗಿ ಹಾಗೂ ವಿದ್ಯಾನಗರ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿದೆ. ಹಾಹೂ ಜಗದೀಶ ಶೋಟೆಪ್ಪ ಬಂಡಿವಾಡ ಈತನ ಮೇಲೆ ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ‌ ಇದೆ.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಹಾಗೂ ಹೆಚ್ಚುವರಿ ಪೊಲೀಸ್,‌ ಭಟ್ಕಳ‌ ಡಿ ವೈಎಸ್ಪಿ ಶ್ರೀಕಾಂತ, ಕೆ. ಮಾರ್ಗದರ್ಶನದಲ್ಲ. ಚಂದನಗೋಪಾಲ (ಪ್ರಭಾರ), ಪೊಲೀಸ್ ವ್ಯಕ್ತ ನಿರೀಕ್ಷಕರು ಭಟ್ಕಳ ಗ್ರಾಮಾಂತರ ವೃತ್ತರವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಿ ಮಂಕಿ ಪೊಲೀಸ್ ಠಾಣೆಯ ಸಿಪಿಐ ಭರತಕುಮಾರ .ವಿ, ಮುಶಾಹಿದ್ ಅಹ್ಮದ ಹಾಗೂ ಶಿವಕುಮಾರ ಆರ್ ಪಿಎಸ್‌ಐ ತನಿಖೆ ಮುರ್ಡೇಶ್ವರ ಠಾಣೆ, ಮಂಕಿ ಹಾಗೂ ಮುರ್ಡೇಶ್ವರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಲೋಕೇಶ ಕತ್ತಿ, ಮುರುಳಿಧರ ನಾಯ್ಕ, ವಿಜಯ ನಾಯ್ಕ, ಮಹದ ಶಫೀ(ಯಲ್ಲಾಪುರ ಠಾಣಿ) ರಾಜು ಗೌಡ, ಬಸವನಗೌಡ ಜರಾದಾರ ಹಾಗೂ ಸಿಬ್ಬಂದಿಗಳು ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.