ಸುದ್ದಿಬಿಂದು ಬ್ಯೂರೋ

ಶಿರಸಿ: ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷಾಧಿಕಾರಿ ಮತ್ತು ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಿ ಸರಕಾರದ ಆದೇಶ ನೀಡಿದೆ.

ಶಿರಸಿ ತಾಲೂಕು ಹೆಗಡೆಕಟ್ಟಾ ಕಲ್ಮನೆ ಮೂಲದವರಾದ ಎಂ.ಕೆ. ಹೆಗಡೆ ಕಳೆದ 28 ವರ್ಷಗಳಿಂದ ಕನ್ನಡಪ್ರಭ, ವಿಜಯವಾಣಿ, ವಿಜಯಕರ್ನಾಟಕ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ, ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ಸದ್ಯ ತಮ್ಮದೇ ಆದ “ಪ್ರಗತಿವಾಹಿನಿ ” ಸುದ್ದಿ ಸಂಸ್ಥೆ ನಡೆಸುತ್ತಿದ್ದು, ಬೆಳಗಾವಿಯಲ್ಲಿ ವಾಸಿಸುತ್ತಿದ್ದಾರೆ.

ಅವರನ್ನು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ವಿಶೇಷಾಧಿಕಾರಿ ಮತ್ತು ಮಾಧ್ಯಮ ಸಲಹೆಗಾರರಾಗಿ ನೇಮಿಸಿ ಸರಕಾರದಿಂದ ಆದೇಶ ನೀಡಲಾಗಿದೆ.