ಸುದ್ದಿಬಿಂದು ಬ್ಯೂರೋ
ಕಾರವಾರ :
ಶಿಕ್ಷಣ ಇಲಾಖೆ ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ.1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ.ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ನಿಯಮ ಅನುಷ್ಠಾನಕ್ಕೆ ಬಂದಿರುವಂತೆ ಕಾಣುತ್ತಿಲ್ಲ.

ಉತ್ತರಕನ್ನಡ ಜಿಲ್ಲೆ ಪ್ರಮುಖವಾಗಿ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಶಾಲೆಯಿಂದ ಮನೆಗಳು ಸಹ ತುಂಬಾ ದೂರ ಇರುವುದರ ಜೊತಗೆ ಅನೇಕ ಕಡೆಗಳಲ್ಲಿ ಸರಿಯದ ಬಸ್ ವ್ಯವಸ್ಥೆ ಇಲ್ಲದೆ. ಕಿಲೋಮೀಟರ್ ತನಕ ವಿದ್ಯಾರ್ಥಿಗಳು ಭಾರವಾದ ಬ್ಯಾಗ್ ಹೊತ್ತುಕೊಂಡೆ ಶಾಲೆಗೆ ತೆರಳಬೇಕಿದೆ. ಹೀಗಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಸಹ ಇದೆ. ಶಿಕ್ಷಣ ಇಲಾಖೆಯೆ ವಿದ್ಯಾರ್ಥಿಗಳ ಬ್ಯಾಗ್ ಬಾರವನ್ನ ಕಮ್ಮಿ ಮಾಡುವಂತೆ ಆದೇಶಿಸಿದ್ದರು. ಜಿಲ್ಲೆಯಲ್ಲಿನ ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿನ ಆಡಳಿತ‌ ಮಂಡಳಿ ಇದುವರೆಗೆ ವಿದ್ಯಾರ್ಥಿಗಳ ಬ್ಯಾಗ್ ಬಾರವನ್ನ ಕಮ್ಮಿ ಮಾಡುವ ಬಗ್ಗೆ ಗಮನ ಹರಿಸದೆ ಇರುವುದು ದುರಂತ.

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ 1 ರಿಂದ 2ನೇ ತರಗತಿಯ ಮಕ್ಕಳಿಗೆ 1.5 ರಿಂದ 2 ಕೆ.ಜಿ, 3ರಿಂದ 5ನೇ ತರಗತಿ 2 ರಿಂದ 3 ಕೆ.ಜಿ, 6 ರಿಂದ 8 ತರಗತಿ 3 ರಿಂದ 4 ಕೆ.ಜಿ ಹಾಗೂ 9 ರಿಂದ 10ನೇ ತರಗತಿಯ ಮಕ್ಕಳಿಗೆ 4 ರಿಂದ 5 ಕೆ.ಜಿ.ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಹಿಂದಿನಂತೆ ಈಗಲೂ ಅಷ್ಟೆ ಬಾರದ ಬ್ಯಾಗ್ ಬೆನ್ನಿಗೆ ಹಾಕಿ ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸುತ್ತಿದ್ದಾರೆ.

ಮಕ್ಕಳಿಗೆ ಅತಿ ಹೆಚ್ಚಿನ ಪುಸ್ತಕಗಳನ್ನು ತರುವುದನ್ನು ತಪ್ಪಿಸಲು ವೇಳಾಪಟ್ಟಿ ರೂಪಿಸಿ ಆ ಪ್ರಕಾರವೇ ತರಗತಿ ನಡೆಸಬೇಕು ಎನ್ನುವ ಆದೇಶ ಇದೆ. ಶಾಲಾ ಆಡಳಿತ ಮಂಡಳಿ ಈ ಬಗ್ಗೆ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿಲ್ಲ.ಹೆಚ್ಚಿಗೆ ಬಾರ ಇರುವ ಬ್ಯಾಗ್ ಬೆನ್ನಿಗೆ ಹಾಕಿಕೊಂಡಿ ಹೋಗುವುದರಿದ ಮಕ್ಕಳು ಎತ್ತರವಾಗಿ ಬೆಳೆಯುವುದು ಕಷ್ಟವಾಗಲಿದೆ. ಹೀಗಾಗಿಯೇ ಇತ್ತೀಚಿನ ವರ್ಷದಲ್ಲಿನ ವಿದ್ಯಾರ್ಥಿಗಳು ಇನ್ನೂ ತುಂಬಾ ಚಿಕ್ಕದಾಗಿ ಇದ್ದಾರೆ.