ಸುದ್ದಿಬಿಂದು ಬ್ಯೂರೋ
ಕುಮಟ
:‌ ಮನೆಯಿಂದ ಬ್ಯಾಂಕ್ ಗೆ ಬರುತ್ತಿದ್ದ ಉದ್ಯೋಗಿ (Bank Employee) ಒಬ್ಬರು ಹೃದಯಾಘಾದಿಂದ.(Heart Attack) ಮೃತಪಟ್ಟಿರುವ ಘಟನೆ ಬರ್ಗಿಯಲ್ಲಿ ಇಂದು ಗುರುವಾರ ನಡೆದಿದೆ.

ಪ್ರಕಾಶ ಅರವಣಕರ್ (40) ಮೃತ ಬ್ಯಾಂಕ್ ನೌಕರರಾಗಿದ್ದರು. ಇವರು ಕುಮಟ ತಾಲೂಕಿನ ಅಳ್ವೇಕೋಡಿ ನಿವಾಸಿಯಾಗಿದ್ದು, ಬರ್ಗಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ (Karnataka Vikas Grameen Bank) ಕ್ಯಾಶಿಯರ್ ಆಗಿದ್ದರು

ಅವರು ಇಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಕಚೇರಿಗೆ ಬರುತ್ತಿರುವಾಗ ಒಂದೆ ಸಮನೆ ಎದೆ ನೋವು ಕಾಣಿಸಿಕೊಂಡಿದೆ. ಇನ್ನೇನು ಕಚೇರಿಗೆ ತಲುಪ ಬೇಕು ಎನ್ನುವಷ್ಟರಲ್ಲಿ ಎದೆ ನೋವು ಮತ್ತಷ್ಟು ಜಾಸ್ತಿ ಆಗಿದೆ. ತಕ್ಷಣ ಅವರನ್ನ ಖಾಸಗಿ ವಾಹನವೊಂದರಲ್ಲಿ ಕುಮಟ ಸರಕಾರಿ ಆಸ್ಪತ್ರೆ(Government Hospital)ಕರೆದುಕೊಂಡು ಹೋಗುತ್ತಿರುವಾಗಲೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.