ಸುದ್ದಿಬಿಂದು ಬ್ಯೂರೋ
ಕಾರವಾರ : ಸರಿಯಾದ ಸಮಯಕ್ಕೆ ವೆಂಟಿಲೇಟರ್ ಇರುವ ಅಂಬುಲೆನ್ಸ್( Ventilator Ambulance Problem,) ಸಿಗದೆ ಇರುವ ಕಾರಣ ಮೂರು ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಕಿನ್ನರ ಮೂಲದ ರಾಜೇಶ ಎನ್ನುವವರ ಗುಂಡು ಮಗುವಾಗಿದೆ. ಐದು ವರ್ಷಗಳ ನಂತರ ದಂಪತಿಗೆ ಗಂಡು ಮಗು ಜನಿಸಿತ್ತು. ಆ ಮಗುವಿಗೆ ಕಫಾ ಹಿನ್ನಲೆಯಲ್ಲಿ ಕಾರವಾರದಬ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.
ಆದರೆ ಸರಿಯಾದ ಸಮಯಕ್ಕೆ ಮಗುವನ್ನ ಉಡುಪಿ ಆಸ್ಪತ್ರೆಗೆ(Udupi Hospital) ಸಾಗಿಸಲು ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ಇಲ್ಲದೆ ದುರಂತ ಘಟನೆ ನಡೆದಿದೆ ಎನ್ನಲಾಗಿದೆ.ಇನ್ನೂ ಮಗುವಿನ ಪೊಷಕರು ಉಡುಪಿಯಿಂದಲೇ ವೆಂಟಿಲೇಟರ್ ಅಂಬುಲೆನ್ಸ್ ತರೆಸಲು ಮುಂದಾಗಿದ್ದರಂತೆ. ಉಡುಪಿಯಿಂದ ಕಾರವಾರಕ್ಕೆ ಅಂಬ್ಯುಲೆನ್ಸ್ ಬರುವಷ್ಟರಲ್ಲಿ ಮಗು ಮೃತಪಟ್ಟಿದೆ.ಘಟನೆಯಿಂದ ಆಸ್ಪತ್ರೆ ಮುಂದೆ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.