ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಬಳಿ ರಾಷ್ಟೀಯ ಹೆದ್ದಾರಿ 66ರಲ್ಲಿ ಉಂಟಾಗಿದ್ದ ಗುಡ್ಡಕುಸಿತ ದುರಂತದ ಕಾರ್ಯಚರಣೆಯಲ್ಲಿ ಶ್ರಮಿಸಿದ‌ ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನ ಕೇರಳದ ನಾಗರಿಕರಿಂದ ಬೆಂಗಳೂರಿನಲ್ಲಿ ನಡೆದ ಓನವಿಲ್ಲು 2024 ಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾರವಾರ ಶಾಸಕರಾಗಿರುವ ಸತೀಶ ಸೈಲ್‌ ಅವರು ತಮ್ಮ ಕ್ಷೇತ್ರದ ಜನರ ಕಾಳಜಿ ಜೊತೆ ಕೇರಳದವಾರದ ನಮ್ಮವರ ಬಗ್ಗೆಯೂ ಸಹ ಅಷ್ಟೆ ಕಾಳಜಿಯಿಂದ ಶ್ರಮೀಸಿದ್ದಾರೆ. ಜೀವ ಎನ್ನುವುದು ಪ್ರತಿಯೊಬ್ಬರದ್ದು ಒಂದೆ. ಜೀವದ ಬೆಲೆ ಏನು ಇನ್ನುವುದನ್ನ ಸೈಲ್ ಅವರು ತುಂಬಾ ಅರ್ಥಮಾಡಿಕೊಂಡಿದ್ದಾರೆ. ಅವರು ನಮ್ಮ‌ ಕೇರಳದ ಮನೆ ಮಗನಂತೆ. ಜನಪ್ರತಿನಿಧಿಯಾವರು ಈ‌ ರೀತಿಯಾಗಿ ಕೆಲಸ‌‌‌ ಮಾಡಿದ್ದನ್ನ ನಾವು ನಮ್ಮ ಕೇರಳದಲ್ಲೂ ನೋಡಿಲ್ಲ.‌ಸತೀಶ ಸೈಲ್ ಅವರನ್ನ ಶಾಸಕರನ್ನ ಪಡೆದ ಕಾರವಾರ ಜನತೆ ನಿಜಕ್ಕೂ ಪೂಣ್ಯವಂತರು. ಶಿರೂರು ಘಟನೆ ನಡೆದಾಗಿನಿಂದ ಪ್ರತಿದಿನವೂ ಅವರು ಸ್ಥಳದಲ್ಲೇ ಇದ್ದು, ತಮ್ಮ ಮನೆಯ ಸದಸ್ಯರನ್ನ ಕಳೆದುಕೊಂಡವರಂತೆ ಕಾಳಜಿಯಿಂದ‌‌ ಎಲ್ಲರ ಪತ್ತೆಗಾಗಿ ಶ್ರಮಿಸಿದ್ದಾರೆ. ಇಂತಹ ಶಾಸಕರನ್ನ ಸನ್ಮಾನಿಸುವಂತಹ ಸಮಯ ಸಿಕ್ಕಿರುವುದು ಕೇರಳದವರಾದ ನಮ್ಮ‌ ಪೂಣ್ಯ ಎಂದು ಸಂಘಟಕರು ತಿಳಿಸಿದರು..

ಕೇರಳದ‌ ಪ್ರಮುಖರಾದ ಅಲೆಕ್ಸ್ ಮಾತನಾಡಿ ಸೈಲ್‌ ಅವರ ಆ ಕ್ಷಣದ ಕಾರ್ಯವನ್ನ ನೋಡಿದಾಗ ಇವರು ಶಾಸಕರಾ.ಶಾಸಕರಾದರೂ ಹೀಗೆಲ್ಲಾ ಕೆಲಸ‌ ಮಾಡಬಹುದಾ ಎಂದು ನಾವು ಒಮ್ಮೆ ಯೋಚಿಸುವಂತಾಗಿತ್ತು.‌ನಾವು ಯಾವ ಕ್ಷಣದಲ್ಲಿ ಟಿವಿಯಿಲ್ಲಿ ನೋಡಿದರು ಇವರೆ ಕಾರಣತ್ತಾ‌ ಇದ್ದರು. ಆ ನದಿಯಲ್ಲಿ ಸಣ್ಣ ಸಣ್ಣ‌ ದೋಣಿ ಮೇಲೆ ಸಾಗುವುದಾಗಲಿ,ಕಾರ್ಯಚರಣೆ ಮಾಡುವವರಿಗೆ ಸಲಹೆ ನೀಡುವುದಾಗಲಿ ಎಲ್ಲವೂ ಮೆಚ್ಚುವಂತಹದ್ದೆ.‌ಅವರು ಅರ್ಜುನ್ ಲಾರಿ ನದಿಯಲ್ಲೇ ಕೊಚ್ಚಿ ಹೋಗಿದೆ ಅಂತಾ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನ ಕೂಡ ನೋಡಿದ್ದೇವೆ. ಆದರೆ ಕೊನೆಗೂ ಅವರು ಹೇಳಿದಂತೆ ಅಲ್ಲೆ ಲಾರಿ ಹಾಗೂ ಅರ್ಜುನ್ ಶವ ಪತ್ತೆಯಾಗಿದೆ. ಅರ್ಜುನನ ಲಾರಿ ಮತ್ತು ಅರ್ಜುನನ ಮೃತ ಅವಶೇಷ ಪತ್ತೆಗಾಗಿ ಶ್ರಮ ವಹಿಸಿದ್ದಲ್ಲದೆ ಸರ್ಕಾರದಿಂದ ದೊರೆಯುವ 5 ಲಕ್ಷ ಹಣದ ಜೊತೆಗೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡಿ ಕೇರಳದವರೆಗೂ ಬಂದು ಸಹಕರಿಸಿರುವುದು ನಿಜಕ್ಕೂ ವಿಶೇಷ.

ಸನ್ಮಾನ ಸ್ವೀಕರಿಸಿದ ಶಾಸಕ ಸತೀಶ್ ಸೈಲ್ ಮಾತನಾಡಿ ನನ್ನ ಕ್ಷೇತ್ರದಲ್ಲಿ ಆದ ಅತಿ ದೊಡ್ಡ ದುರಂತ ಇದಾಗಿದೆ. ಮೃತರಾದ 11ಜನರಲ್ಲಿ 9ಮೃತ ದೇಹಗಳ ಅವಶೇಷಗಳು ಇದುವರೆಗೆ ಪತ್ತೆಯಾಗಿದೆ. ಇನ್ನೂ ಇಬ್ಬರ ಮೃತದೇಹದ ಅವಶೇಷಗಳು ಸಿಕ್ಕಿಲ್ಲ‌ ಎನ್ನುವ ಬಗ್ಗೆ ದುಖಃ ಇದೆ. ಮೂಳೆ ಸಿಕ್ಕರು ಸಹ ವೈದ್ಯರು ಮಾಡಿದ‌ ತಪ್ಪಿನಿಂದಾಗಿ ವರದಿ ಬರಲು ವಿಳಂಬವಾಗುತ್ತಿದೆ. ಆ ಕುಟುಂಬಕ್ಕೆ ಅವರ ಅವೇಷ ಪತ್ತೆ ಹಚ್ಚಿಕೊಂಡೆ ಮನೆಗೆ ಬರುತ್ತೇನೆ ಎಂದು ಮಾತುಕೊಟ್ಟಿದ್ದೆ. ಆದರೆ ಅದು ಇನ್ನೂ ಆಗಿಲ್ಲ..ಸಿಕ್ಕಿರುವ ಎರಡು ಮೂಳೆಯ ವರದಿಗಾಗಿ ಕಾಯುತ್ತಿದ್ದೇವೆ. ಆದರೆ ಏನೆ ಇದ್ದರೂ ಸಹ ಆ ಕುಟುಂಬದ ಜೊತೆ ನಾನು ಸದಾ ಇದ್ದೇನೆ.ಅವರಿಗೆ ಬೇಕಾಗುವ ಎಲ್ಲಾ ಸಹಾಯ ಸಹಕಾರವನ್ನ ನಾನು ಮಾಡುತ್ತೆನೆ ಎಂದರು..

ಕಾರ್ಯಕ್ರಮದ ವೇದಿಕೆಯಲ್ಲಿ ಎ ಐ ಸಿಸಿ ಸದಸ್ಯ ಸತ್ಯಂ ಪುತ್ತೂರು, ಗೋಕುಲಮ್ ಗ್ರೂಪ್ಸ್ ಅದ್ಯಕ್ಷ ಗೋಕುಲನ್ ಗೋಪಾಲನ್, ಹರ್ರಿಸ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

ಗಮನಿಸಿ