ಸುದ್ದಿಬಿಂದು ಬ್ಯೂರೋ
ಕುಮಟಾ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಬಿ ಕೆ ಹರಿಪ್ರಸಾದ(B K Hariprasada) ಅವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ( Leader of the Opposition in the Legislative Council) ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Govt)ಬಂದ ಮೇಲೆ ಅವರಿಗೆ ವಿಧಾನ ಪರಿಷತ್‌ನ ಸಭಾ ನಾಯಕ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಈಡಿಗ ಬಿಲ್ಲವ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ ಬೇಸರ ವ್ಯಕ್ತಪಡಿಸಿದ್ದರು.

ಡಿಸೆಂಬರ್ 10ರಂದು ಬೆಂಗಳೂರನ ಅರಮನೆ ಮೈದಾನ ನಡೆಯಲಿರುವ(Bangalore Palace Grounds) ಆರ್ಯ ಈಡಿಗ,ನಾಮಧಾರಿ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕುಮಟಾದ ನಾಮಧಾರಿ ಸಭಾಭವನಲ್ಲಿ ‌ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಮಂಜುನಾಥ ‌ನಾಯ್ಕ ಅವರು ಬಿ ಕೆ ಹರಿಪ್ರಸಾದ ಅವರಿಗಾದ ಅನ್ಯಾಯವನ್ನು ಬೆಂಗಳೂರಿನಲ್ಲಿ ನಡೆಯುವ ಈಡಿಗ, ಬಿಲ್ಲವ, ಪೂಜಾರಿ, ನಾಮಧಾರಿ ಸೇರಿ 26 ಪಂಗಡಗಳ ಬೃಹತ್ ಜಾಗೃತಾ ಸಮಾವೇಶದಲ್ಲಿ ಪ್ರಮುಖ ಹಕ್ಕೋತ್ತಾಯವಾಗಬೇಕು.

ಅದು ಅವರಿಗಾದ ಅನ್ಯಾಯವಲ್ಲ. 26 ಪಂಗಡಗಳನ್ನು ಒಳಗೊಂಡ ಈಡಿಗ ನಾಮಧಾರಿ ಬಿಲ್ಲವ ಸಮಾಜಕ್ಕಾದ ಅನ್ಯಾಯವಾಗಿದೆ. ಈ ಅನ್ಯಾಯದ ಬಗ್ಗೆ ಸಮಾವೇಶದಲ್ಲಿ ಜಾಗೃತಿ ಮೂಡಿಸುವುದರ ಮೂಲಕ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದು ಸಮಾಜದ ಮುಖಂಡರ ಎದುರು ಮಂಜುನಾಥ ಎಲ್ ನಾಯ್ಕ ಆಗ್ರಹಿಸಿದರು.