ಸುದ್ದಿಬಿಂದು ಬ್ಯೂರೋ
Sirsi : ಶಿರಸಿ::ಕಾಡುಬೆಕ್ಕು ಹಿಡಿಯಲು ವಿದ್ಯುತ್ ಕಂಬದ ಹತ್ತಿದ ಚಿರತೆ ವಿದ್ಯುತ್ ಶಾಕ್ ನಿಂದಾಗಿ ಚಿರತೆ ಹಾಗೂ ಕಾಡುಬೆಕ್ಕು ಎರಡು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಳಗಲ್ ಮನೆ ಬಳಿ ನಡೆದಿದೆ.

ಹಸಿನಿಂದ‌ ಇದ್ದ ಚಿರತೆ ಕಣ್ಣಿಗೆ ಕಾಡು ಬೆಕ್ಕು ಕಾಣಿಸಿಕೊಂಡಿದೆ.‌ ಬೆಕ್ಕನ್ನ ಕಂಡ ಚಿರತೆ ಅದನ್ನ‌ ಹಿಡಿಲು ಓಡಿದೆ.‌‌ಹೇಗಾದರೂ ಮಾಡಿ ಪ್ರಾಣ ಉಳಿಕೊಳ್ಳಬೇಕು ಎಂದು ಕಾಡು ಬೆಕ್ಕು ಅಲ್ಲೆ‌ಇದ್ದ ವಿದ್ಯುತ್ ಕಂಬವನ್ನ ಹತ್ತಿದ್ದು, ಚಿರತೆ ಸಹ ವಿದ್ಯುತ್ ಕಂಬ ಹತ್ತಿದ್ದು, ಈ‌ವೇಳೆ ವಿದ್ಯುತ್ ‌ತಂತಿ‌ ತಗುಲಿ ಚಿರತೆ‌ ಮತ್ತು ‌ಕಾಡು ಬೆಕ್ಕು ಎರಡು ವಿದ್ಯುತ್ ತಂತಿ ಮೇಲೆ‌ ಸಾವನ್ನಪ್ಪಿದೆ. ಈ ಚಿರತೆ ಮೂರು ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಡಿ.ಎಫ್.ಓ. ಅಜ್ಜಯ್ಯ ಹಾಗೂ ಆರ್.ಎಫ್.ಓ. ಶಿವಾನಂದ ಭೇಟಿ ಪರಿಶೀಲನೆ ನಡೆಸಿದ್ದಾರೆ.