ಸುದ್ದಿಬಿಂದು ಬ್ಯೂರೋ
ಶಿರಸಿ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಬರ್ತಾರೆ ಎಂಬ ಈಶ್ವರಪ್ಪನವರ ಹೇಳಿಕೆ ವಿಚಾರಕ್ಕೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈಶ್ವರಪ್ಪನವರ ಈ‌ತರಹ ಮಾತು ಇದ್ದಿದ್ದೆ. ಅವರ ಮಾತಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ವಿಚಾರನೆ ಇಲ್ಲ ಎಂದು ಈಶ್ವರಪ್ಪ ಹೇಳಿಕೆಯನ್ನ ಸತೀಶ ಜಾರಕಿಹೊಳಿ ಅಲ್ಲೆಗೆಳೆದಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ವಿಶ್ವಾಸ ಇದೆ ಎಂದರು.ಇನ್ನೂ ಬಿ ಕೆ ಹರಿಪ್ರಸಾದ ಅವರಿಗೆ ಸರಕಾರದಲ್ಲಿ ಸ್ಥಾನಮಾನ ನೀಡದೆ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಪಕ್ಷದಲ್ಲಿ ಸಾಕಷ್ಟು ಜನ ಹಿರಿಯರು ಇದ್ದಾರೆ. ಎಲ್ಲರಿಗೂ ಸರಿಯಾದ ಸಮಯ ಬಂದಾಗ ಸೂಕ್ತ ಸ್ಥಾನ ಮಾನ ನೀಡಲಾಗುವುದು. ಬಿ ಕೆ ಹರಿಪ್ರಸಾದ ಹಿರಿಯರಿದ್ದಾರೆ ಅವರ ಬಗ್ಗೆ ಗೌರವ ಇದೆ.

ದಲಿತ ಸಿಎಂ ವಿಚಾರ ಪಕ್ಷದ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದ ಜಾರಕಿಹೊಳಿ.ನಿಗಮಂಡಳಿ ಹಂಚಿಕೆ ಸದ್ಯದಲ್ಲೆ ನಡೆಯಲಿದೆ ಸದ್ಯ 25ಜನರಿಗೆ ಕೊಡ್ತೆವೆ.ಲೋಕಸಭಾ ಚುನಾವಣೆ ಬಳಿಕ ಮತ್ತೆ ಹಂಚಿಕೆ ಮಾಡ್ತೆವೆ ಎಂದ.ಇಲ್ಲಿ ಯಾವುದೆ ಅಸಮಧಾನ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇದೆ ಎಂದರು..