ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಶಿರೂರು ಗುಡ್ಡಕುಸಿತ ಘಟನೆ ನಡೆದು ಎರಡು ತಿಂಗಳು ಕಳೆದಿದೆ. ಇಂದಿನಿಂದ ಮೂರನೇ ಹಂತದ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾರವಾರ -ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರು ಮೂರನೇ ಹಂತದ ಕಾರ್ಯಚರಣೆ ಚಾಲನೆ ನೀಡಿದ್ದಾರೆ. ಇಂದಿನ ಕಾರ್ಯಚರಣೆ ಹೇಗಿತ್ತು ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಶಿರೂರು ಗುಡ್ಡಕುಸಿತ ನಡೆದು ಈಗಾಗಲೆ ಎರಡು ತಿಂಗಳು ಕಳೆದಿದೆ, ಎರಡು ಹಂತದ ಕಾರ್ಯಾಚರಣೆ ಈಗ ಮಾಡಿ ಮುಗಿಸಲಾಗಿದೆ, ಆದರೆ ನಾಪತ್ತೆಯಾದ ಕೇರಳ ಮೂಲದ ಲಾರಿ ಮತ್ತು ಮೂವರ ಪತ್ತೆಯಾಗಿಲ್ಲ, ಸಾಕಷ್ಟು ಆಯಾಮದಲ್ಲಿ ಕಾರ್ಯಾಚರಣೆ ಮಾಡಿದರು ಕೂಡಾ ಯಶಸ್ಸು ಸಿಕ್ಕಿಲ್ಲ, ಈಗ ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು ಮೂರನೇ ಹಂತದ ಕಾರ್ಯಾಚರಣೆ ಆರಂಭಿಸಲಾಗಿದೆ. ಜಿಲ್ಲಾಡಳಿತದಿಂದ ಮೂರನೇ ಹಂತದ ಕಾರ್ಯಾಚರಣೆಗೆ ಗೋವಾ ರಾಜ್ಯದ ಪಣಜಿಯಿಂದ ಡೀಪ್ ಡ್ರೆಜಿಂಗ್ ಬಾರ್ಜ್ ನ್ನು ತರಿಸಿಕೊಳ್ಳಲಾಗಿದೆ, ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಪ್ರಮುಖರು ಬಾರ್ಜ್‌ಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಚರಣೆ ಆರಂಭಿಸಿದ್ದಾರೆ.

ನದಿಯ ಮದ್ಯೆ ಶೇಖರಣೆಯಾದ ಗುಡ್ಡದ ಮಣ್ಣು ಮತ್ತು ಕಲ್ಲಿನ ರಾಶಿ ರಾಶಿಯ ತೆರವು ಕಾರ್ಯ ಆರಂಭವಾಗಿದೆ., ಇಲ್ಲಿ ಲಾರಿಯ ಪತ್ತೆ ಕಾರ್ಯ, ಮತ್ತು ಮೂವರ ಶೋಧ ಕಾರ್ಯ ನಡೆಯಲಿದೆ. ಸಂಜೆ ವೇಳೆ ನಡೆಸಿದ ಕಾರ್ಯಚರಣೆಯಲ್ಲಿ ಗುಡ್ಡಕುಸಿತದಿಂದಾಗಿ ನದಿಯಲ್ಲಿ ಬಿದ್ದಿರುವ ಮರದ ಒಂದಿಷ್ಟು ಭಾಗದ ಜೊತೆಗೆ ಕೊಲವೊಂದು ಕಬ್ಬಿಣದ ವಸ್ತುಗಳು ಪತ್ತೆಯಾಗಿದೆ. ಇದು ಲಾರಿಯ ಅವಶೇಷಗಳು ಇರಬಹುದು ಎಂದು ಉಹಿಸಲಾಗಿದೆ.

ಮೂರನೇ ಹಂತದ ಕಾರ್ಯಾಚರಣೆಗೆ ಶಾಸಕ ಸತೀಶ್ ಸೈಲ್ ವಿಶೇಷ ಕಾಳಜಿ ವಹಿಸಿ ಪಣಜಿಯಿಂದ ಡ್ರೆಜಿಂಗ್ ಬಾರ್ಜ್ ತರಿಸಿದ್ದಾರೆ, ಆರಂಭದ ಎರಡು ಹಂತದ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ, ಮೇಜರ್ ಇಂದ್ರ ಬಾಲನ್, ಸೇರಿ ನೌ ಸೇನೆ, NDRF SDRF ಸೇರಿ ಹಲವು ತಜ್ಞರಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಮಳೆಯ ಆರ್ಭಟ, ನದಿ ಹರಿವಿನ ವೇಗ ಕಾರ್ಯಾಚರಣೆಗೆ ಭಾರೀ ತೊಡಕು ಮಾಡಿತ್ತು,

ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು ಕಾರ್ಯಾಚರಣೆಗೆ ಸೂಕ್ತ ಸಮಯವಾಗಿದೆ, ಈ ಹಿನ್ನಲೆಯಲ್ಲಿ ಇಂದಿನಿಂದ ಡ್ರೆಜಿಂಗ್ ಬಾರ್ಜ್ ತಂದು ಕಾರ್ಯಾಚರಣೆಗೆ ಇಳಿಸಲಾಗುತ್ತಿದೆ. ಇಂದಿನಿಂದ ಹತ್ತು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.

ಗಮನಿಸಿ