suddibindu.in
Karwar : ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ನಾಪತ್ತೆಯಾಗಿರುವ ಲಾರಿ ಮಣ್ಣಿನ ಅಡಿಯಲ್ಲಿ ಇರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಖಚಿತ ಪಡಿಸಿದ್ದಾರೆ.
ಲಾರಿ ಮಣ್ಣಿನಲ್ಲಿ ಹೂತು ಹೋದ ಜಾಗ ಮೆಟಲ್ ಡಿಟೆಕ್ಟರ್ ಮೂಲಕ ಪತ್ತೆಯಾಗಿದೆ. ನಾಳೆ ದೇಹಲಿಯಿಂದ ಇನ್ನೊಂದು ಖಾಸಗಿ ಸಂಸ್ಥೆಯವರು ಆಗಮಿಸಲಿದ್ದಾರೆ.ಲಾರಿ ಇರುವ ಜಾಗ ಖಚಿತವಾಗಲಿದೆ. ಇಂದಿನ ಕಾರ್ಯಚರಣೆಯಲ್ಲಿ ನಾಲ್ಕು ಭಾಗದಲ್ಲಿ ಕಬ್ಬಿಣದ ಭಾಗಗಳು ಇವೆ ಎನ್ನುವ ಬಗ್ಗೆ ಖಾತ್ರಿಯಾಗಿದೆ.ಡಿಟೆಕ್ಟ್ ಆದ ಜಾಗದಲ್ಲಿ ನಾಳೆ ಇನ್ನಷ್ಟು ತ್ವರಿತವಾಗಿ ಕಾರ್ಯಾಚರಣೆ ನಡೆಯಲಿದೆ.ನಾಳೆ ದೇಹಲಿಯಿಂದ ಬಂದ ತಂಡ ಕೂಡಾ ಖಚಿತ ಪಡಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಇನ್ನೂ ನಾಳೆ ಕದಂಬ ನೌಕಾಪಡೆಯಿಂದಲ್ಲೂ ಕಾರ್ಯಚರಣೆ ನಡೆಸುವ ಸಾಧ್ಯತೆ ಇದ್ದು, ಕಾರ್ಯಚರಣೆ ಸ್ಥಳಕ್ಕೆ ಹೋಗದಂತೆ ಮಾಧ್ಯಮದವರು ಸೇರಿದಂತೆ ಎಲ್ಲರಿಗೂ ನಿರ್ಬಂಧ ಹಾಕಲಾಗಿದೆ.