ಸುದ್ದಿಬಿಂದು ಬ್ಯೂರೋ
ಕಾರವಾರ
: ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಓರ್ವ ವೃದ್ದ ಮಹಿಳೆ‌‌ ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಅರಗಾ ಗ್ರಾಮದಲ್ಲಿ ನಡೆದಿದೆ.

ತಾರಾಮತಿ ನಾಯ್ಕ (85) ಎಂದು ಅಂದಾಜಿಸಲಾಗಿದೆ, ನಿನ್ನೆಯಿಂದ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ‌ಸುರಿಯುತ್ತಿದೆ. ಹೀಗಾಗಿ ಮಳೆಯ ನೀರು ಮೃತ ತಾರಾಮತಿ ಅವರ ಮನೆಗೆ ನುಗ್ಗಿದ್ದು, ವೃದ್ದ ಮಹಿಳೆ ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ‌ ನೀರಿನ ಸೆಳೆತಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಇನ್ನೂ ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ‌ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.