ಸುದ್ದಿಬಿಂದು ಬ್ಯೂರೋ
ಹಳಿಯಾಳ: ತಾಲೂಕಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಯುವಕ ಮಂಜುನಾಥ ಇಂಗಳಗಿ (23) ಎನ್ನುವಾತ ಕಾಳಗಿನಕೊಪ್ಪ ಗ್ರಾಮದಿಂದ ಮುರ್ಕವಾಡಕ್ಕೆ ತೆರಳುವ ರಸ್ತೆ ಮಧ್ಯೆ ಬೆಳಗಿನ ಜಾವ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದಾನೆ.ಇನ್ನೂ ಅಪಘಾತಕ್ಕೆ ಕಾರಣವಾದ ವಾಹನ ಸವಾರ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಇನ್ನೂ ಪಟ್ಟಣದ ಪೋಲಿಸ್ ಠಾಣೆಯ ಹತ್ತಿರದಲ್ಲಿ ಕಾರ್ಮೆಲ್ ಶಾಲೆಗೆ ತೆರಳುವ ತಿರುವಿನಲ್ಲಿಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯ ಟ್ರಾಕ್ಟರ್ ರಿಪೇರಿ ಗ್ಯಾರೆಜ್ ನಲ್ಲಿ ಅವಘದ ಸಂಭವಿದೆ.ಮೆಕ್ಯಾನಿಕ್ ಶಿವಮೊಗ್ಗ ಮೂಲದ ಹಬಿಬ್ ಖಾನ್ ಪಠಾನ್(52) ಟ್ರಾಕ್ಟರ್ ರಿಪೆರಿ ಮಾಡುವ ಸಂದರ್ಭದಲ್ಲಿ ಒಮ್ಮೆಲೆ ಸ್ಟಾರ್ಟ್ ಆದ ಟ್ರಾಕ್ಟರ್ ಹಬಿಬ್ ಮೇಲೆ ಹರಿದು ಕಂಪೌಂಡ್ ಗೋಡೆ ಒಡೆದು ಮುಂದೆ ನುಗ್ಗಿ ದ್ವಿಚಕ್ರ ವಾಹನಕ್ಕೆ ಡಿಕ್ಕೆ ಹೊಡೆದು ಬಳಿಕ ಇನ್ನೊಂದು ಟ್ರಾಕ್ಟರ್ ಟ್ರೇಲರ್ ಗೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಹಬಿಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಹಳಿಯಾಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ವಿಡಿಯೋ ಸಿಸಿ ಟಿವಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.