ಸುದ್ದಿಬಿಂದು ಬ್ಯೂರೋ
ಕಾರವಾರ :ಅರಬ್ಬಿ ಸಮುದ್ರದಲ್ಲಿ (Boat goes missing in Arabian sea)ಉಂಟಾದ ಹವಾಮಾನ ವೈಪರಿತ್ಯದಿಂದಾಗಿ 27ಜನರಿದ್ದ ಗೋವಾ ಮೂಲದ ಬೋಟ್ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಪತ್ತೆ ಕಾರ್ಯ ನಡೆಸಲಾಗುತ್ತಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆನ್ನಲಾಗಿದೆ.
ಅರಬೀ ಸಮುದ್ರದಲ್ಲಿ ಭಾರೀ ದಾಳಿಯಿಂದಾಗಿ ಗೋವಾ (goa)ಮೂಲದ Ind- ga -01MM2233. ನೊಂದಣಿಯ ಕ್ರಿಸ್ಟೋರಿ ಹೆಸರಿನ ಬೋಟ್ ಒಂದು ನಾಪತ್ತೆಯಾಗಿತ್ತು. ಹವಾಮಾನ ವೈಪರಿತ್ಯದಿಂದ(Climate change) ಇಂಜಿನ್ ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ 27ಮೀನುಗಾರರು ಸಹಿತ ಬೋಟ್ ನಾಪತ್ತೆಯಾಗಿತ್ತು.
ಪಣಜಿಯಿಂದ ಅಂಕೋಲಾ ತಾಲೂಕಿನ ಬೇಲಿಕೇರಿ ಯತ್ತ ಬೋಟ್ ಬಂದಿದ್ದು, ಕೋಸ್ಟ್ ಗಾರ್ಡ್(Coast Guard) ಬೋಟ್ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಬೋಟ್‌ನಲ್ಲಿರುವವರಿಗೆ ನೆಟವರ್ಕ್ ಸಮಸ್ಯೆ ಉಂಟಾಗಿದ್ದು, ಸಂಪರ್ಕ ಸಾಧಿಸಲು ಸಾಧ್ಯವಾಗಿರಲಿಲ್ಲ. ಸದ್ಯದ ಮೂಲಗಳ ಪ್ರಕಾರ ಈಗಷ್ಟೆ ಸಂಪರ್ಕಕ್ಕೆ ಸಿಕ್ಕಿರುವುದಾಗಿ ಮಾಹಿತಿ ಲಭ್ಯವಾಗಿದೆ.