ಸುದ್ದಿಬಿಂದು ಬ್ಯೂರೋ
ಕಾರವಾರ ; ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಅಧಿಕಾರಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್ ಪೊಸ್ಟ್‌ ಬಳಿ ನಡೆದಿದೆ.

ಗೋವಾದಿಂದ ಕಂಟೇನರ್ ವಾಹನದ ಮೂಲಕ ಮಂಗಳೂರಿಗೆ ಅಕ್ರಮ ಗೋವಾ ಮದ್ಯವನ್ನ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮೇಲೆ ದಾಳಿ ನಡೆಸಲಾಗಿದ್ದು, ಬರೊಬ್ಬರಿ ಐದು ಲಕ್ಷದ ಗೋವಾ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ.

ಗೋವಾದಿಂದ ಮಂಗಳೂರಿಗೆ ಮದ್ಯ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಅಬಕಾರಿ ಆಯುಕ್ತರಾಗಿರುವ ಕೆ ವಿನೋದ್ ಕುಮಾರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು,ಐದು ಲಕ್ಷ ಮೌಲ್ಯದ 58 ಬಾಕ್ಸ್ ಗೋವಾ ಮದ್ಯ ಹಾಗೂ ವಾಹನ ಸೇರಿ 25ಲಕ್ಷದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಇನ್ನೂ ಮದ್ಯ ಸಾಗಾಟ ಮಾಡುತ್ತಿದ್ದ ಕಂಟೇನರ್ ವಾಹನ ಚಾಲಕ ಮಹ್ಮದ್ ಸಲೀಮ್ ಹಾಗೂ ಕಾರವಾರ ತಾಲೂಕಿನ ಸದಾಶಿವಗಡ ನಿವಾಸಿ ತೇಜಸ್ ಶೇಟ್ ಎಂಬುವವರನ್ನ ಬಂಧಿಸಲಾಗಿದೆ. ಈ ಕುರಿತು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.