ಸುದ್ದಿಬಿಂದು ಬ್ಯೂರೋ
ಕಾರವಾರ: ಕಳೆದ ನಾಲ್ಕುದಿನಗಳಿಂದ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟ್(Missing boat found at sea)ಅರಬ್ಬೀ ಸಮುದ್ರದ ಸುಮಾರು 30ನಾಟಿಕಲ್ ಮೈಲ್ ದೂರಲ್ಲಿ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ 27ಮೀನುಗಾರರನ್ನ ರಕ್ಷಣೆ (Fishermen Rescued) ಮಾಡಲಾಗಿದೆ.
ಈ ಬೋಟ್ ಉತ್ತರ ಕನ್ನಡ ಜಿಲ್ಲೆಯ(Utarakannda)ಅಂಕೋಲಾ ತಾಲೂಲಿನ ಬೇಲಿಕೇರಿ ಬಂದರಿನಿಂದ ಸರಿಸುಮಾರು 30 ಪತ್ತೆಯಾಗಿದೆ. ಗೋವಾದ ಪಣಜಿ(Goa Panaji) ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದೆ.
ಅರಬೀ ಸಮುದ್ರದಲ್ಲಿ(arabian sea)ಹವಾಮಾನ ವೈಪರೀತ್ಯದಿಂದ ಎಂಜಿನ್‌ನಲ್ಲಿ ಸಮಸ್ಯೆಯಾಗಿ ಸಮೀಪದ ಯಾವುದೇ ಬಂದರಿಗೂ ಬರಲಾಗದೆ ನಾಮಪತ್ತೆಯಾಗಿತ್ತು.
ಇನ್ನೂ ಬೋಟ್ ನಲ್ಲಿದ್ದವರಿಗೆ ನೆಟವರ್ಕ್ ಸಂಪರ್ಕ ಸಹ ಸಿಗದೆ ಪತ್ತೆ ಮಾಡಲು ಸಮಸ್ಯೆ ಉಂಟಾಗಿತ್ತು. ನಾಪತ್ತೆಯಾಗಿದ್ದ ಬೋಟ್‌ಗಾಗಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದು, 30 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಪತ್ತೆಯಾಗಿದೆ. ಪತ್ತೆಯಾಗಿರುವ ಬೋಟ್ ಹಾಗೂ 27ಮಂದಿ ಮೀನುಗಾರರನ್ನ ಇದೀಗ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಅವರನ್ನ ಕಾರವಾರ ಬಂದರಿಗೆ ಕರೆತರುತ್ತಿದ್ದಾರೆ.