suddibindu.in
ಸಿದ್ದಾಪುರ : ಸುಟ್ಟು ಕಾರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ದೇಹ ಪತ್ತೆಯಾದ ಘಟನೆ ತಾಲೂಕಿನ ವಾಟಗಾರ ನಲ್ಲಿ ನಡೆದಿದೆ.
ಗಣೇಶ ಮಾಬ್ಲೇಶ್ವರ ಹೆಗಡೆ ( 71) ಸಂಗೊಳ್ಳಿಮನೆ ಮೃತ ವ್ಯಕ್ತಿ.ಈತ ಮನೆಯಲ್ಲಿ ಒಬ್ಬನೇ ವಾಸವಾಗಿದ್ದು ಪತ್ನಿ ಅನಾರೋಗ್ಯದಿಂದ ಮೃತ ಪಟ್ಟಿದ್ದು, ಈತನ ಮಗ ಉಡುಪಿಯಲ್ಲಿ ವಾಸವಾಗಿರುತ್ತಾನೆ.ವಾಟಗಾರ ರಸ್ತೆಯಲ್ಲಿರುವ ಕುಂಟೆಹೊಳೆ ಸೇತುವೆ ಬಳಿ ಬೈಕ್ ಬಿದ್ದುಕೊಂಡಿದ್ದು, ಬೈಕ್ ಪಕ್ಕದಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
ಇದನ್ನೂ ಓದಿ:-
- ಮುಡಾ ಹಗರಣ :ಲೋಕಾಯುಕ್ತ ತನಿಖೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ
- ಮನೆ ಬೀಗ ಮುರಿದು 40ಗ್ರಾಂ ಚಿನ್ನಾಭರಣ ಕಳ್ಳತನ
- ಅಪ್ರಾಪ್ತ ಬಾಲಕಿಗೆ ಮುತ್ತು ಕೊಟ್ಟ ಆರೋಪದಲ್ಲಿ ಹೆಡ್ಕಾನ್ಸಟೇಬಲ್ ಅಮಾನತ್ತು
ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಸಹ ಅಣ್ಣನ ಸಾವಿನಲ್ಲಿ ಬಲವಾದ ಸಂಶಯ ಕಂಡು ಬರುತ್ತಿದ್ದು, ಅ ದಿಶೆಯಲ್ಲಿ ತನಿಖೆ ಕೈಗೊಂಡು ಮರಣದ ನೈಜ ಕಾರಣವನ್ನು ಕಂಡು ಹಿಡಿದು ಸೂಕ್ತ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ಮೃತನ ತಮ್ಮ ಶ್ರೀಧರ್ ಹೆಗಡೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.