ಶಿರಸಿ : ಅನಂತ್ ಮೂರ್ತಿ ಹೆಗ್ಡೆ ಅವರು ದೇಶಪಾಂಡೆ ಅವತ್ತು ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ಕಟ್ಟಲು ಸಲಹೆ ನೀಡಿದ್ದು ಸ್ವಾಗತಾರ್ಹ ಆದರೆ ಅದೇ ಸಲಹೆಯನ್ನು 6 ಬಾರಿ ಸಂಸದರಾಗಿ,ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನಂತ್ ಕುಮಾರ ಹೆಗ್ಗಡೆಯವರಿಗೆ ಹೇಳಲಿ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲೇಶ್ ಗಾಂಧಿ ತಿರುಗೆಟು ನೀಡಿದ್ದಾರೆ.

ದೇಶಪಾಂಡೆಯವರು ಜಿಲ್ಲೆಯನ್ನು ಆಳಿದಷ್ಟು ಸಮಯ ಜಿಲ್ಲೆಯ ಅಭಿವೃದ್ಧಿ ಮತ್ತು ಆಡಳಿತತ್ಮಕವಾಗಿ ಜಿಲ್ಲೆಯನ್ನು ಉತ್ತುಂಗಕ್ಕೆ ಏರಿಸಿದ ಹಿರೇಮೆ ಅವರಿಗೆ ಸಲ್ಲುತ್ತದೆ.ತಮ್ಮ ರಾಜಕೀಯ ಬುನಾದಿಗೆ ಹಿರಿಯ ನಾಯಕರ ಅವಹೇಳನ ಮತ್ತು ಅವರ ವಿರುದ್ದದ ಹೇಳಿಕೆಗಳನ್ನು ಸಹಿಸಲಾಗದು, ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರು ಉದ್ಯೋಗ ಖಾತರಿ ಯೋಜನಯಲ್ಲಿ ಕೂಲಿ ಮಾಡಿ ಸಾವಿರಾರು ಕೋಟಿ ಸಂಪಾದನೆ ಮಾಡಿ ಜೈಲಿಗೆ ಹೋಗಿ ಬಂದಿರುವುದ ?

ದೇಶಪಾಂಡೆಯವರ ಆಸ್ತಿಯ ಲೆಕ್ಕ ಹಾಕುತ್ತಿರುವ ನೀವು ನಿಮ್ಮದೇ ಕೇಂದ್ರ ಸರ್ಕಾರ ಇದೆ IT ಈಡಿ,ಸಿಬಿಐ ಮುಕಾಂತರ ತನಿಖೆ ನೆಡಸಿ ಲೋಪವಿದ್ದಲ್ಲಿ ಜನತೆಗೆ ತಿಳಿಸಿ. ನಿಮ್ಮ ರಾಜಕೀಯ ಅಸ್ತಿತ್ವಕ್ಕೆ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ಸಾರ್ವಜನಿಕರಿಗೆ ಒಳಿತಾಗುವ ಕೆಲಸವನ್ನು ಮಾಡಿ ಆಗ ಜನಗಳು ತಮ್ಮನ್ನು ಹೃದಯದಲ್ಲಿ ಇಟ್ಟು ಆರಾಧಿಸುತ್ತಾರೆ, ಅದನ್ನು ಹೊರತುಪಡಿಸಿ ಇದೆ ರೀತಿ ಸುಳ್ಳು ಹೇಳಿಕೆ ಮುಂದುವರಿದಲ್ಲಿ ಜನತೆಯೇ ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.