suddibindu.in
ಭಟ್ಕಳ : ಅರಬ್ಬಿ ಸಮುದ್ರದಲ್ಲಿ ಅಲೆಯ ಅಬ್ಬರಕ್ಕೆ ಬೋಟ್ ಕಲ್ಲ ಬಂಡೆಗೆ ಬಡಿದು ಸಿಲುಲಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಸಮೀಪ ಅರಬ್ಬೀ ಸಮುದ್ರದಲ್ಲಿ ನಡೆದಿದೆ.
ಈ ಬೋಟ್ ಮಲ್ಪೆ ಮೂಲದ ಕುಲಮಹಾಸ್ತ್ರೀ ಬೋಟು ಹಾನಿಗೆ ಒಳಗಾಗಿರುವ ಬೋಟ್ ಇದಾಗಿದ್ದು, ಮಲ್ಪೆಯ ಸಾಯಿ ಚರಣ ಹೆಸರಿನ ಬೋಟು ನೆರವಿಗೆ ಬಂದಿತ್ತು. ತೆಂಗಿನ ಗುಂಡಿ ಬಂದರು ಸಮೀಪಿಸುತ್ತಿದ್ದಂತೆಯೇ ಕಟ್ಟಿದ್ದ ಹಗ್ಗ ತುಂಡಾಗಿದ್ದು, ಬೃಹದಾಕಾರದ ಅಲೆಗಳಿಂದಾಗಿ ಕುಲಮಹಾಸ್ತ್ರೀ ಬೋಟು ಕಲ್ಲಿಗೆ ಬಡಿದಿದೆ.
ಭಾರೀ ಅಲೆಗಳ ಕಾರಣದಿಂದ ಬೋಟ್ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್ ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು. ಆದರೆ ಆ ವೇಳೆ ಕಟ್ಟಿದ ಹಗ್ಗ ಕಟ್ ಆಗಿರುವ ಕಾರಣ ಬೋಟ್ ದಡಕ್ಕೆ ತರಲು ಸಾಧ್ಯವಾಗಿಲ್ಲ. ಅರಬ್ಬಿ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಅಲೆ ಉಂಟಾಗಿರುವುದೆ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ