suddibindu.in
ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭಂದಿಸಿದಂತೆ ಕಾರ್ಯಚರಣೆ ಪ್ರಾರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಸತೀಶ್ ಸೈಲ್ ಭೇಟಿ ಮಾಡಿ ಚರ್ಚೆ ನಡೆಸಿದರು.
ಜುಲೈ 16ರಂದು ನಡೆದಿದ್ದ ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಅಪಾರ ಪ್ರಮಾಣದ ಮಣ್ಣು ಬಿದ್ದಿದ್ದು, ಇದಲ್ಲದೇ ಮಣ್ಣಿನ ಅಡಿ ಕೇರಳ ಮೂಲದ ಲಾರಿ ಸಹ ಸಿಲುಕಿತ್ತು. ಅಲ್ಲದೇ ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದು ಇನ್ನು ಮೃತದೇಹ ಸಿಕ್ಕಿಲ್ಲ.ಮೃತದೇಹ ಸಿಗದ ಹಿನ್ನಲೆಯಲ್ಲಿ ಸರ್ಕಾರದಿಂದ ನೀಡುವ ಪರಿಹಾರ ಹಣ ಕೊಡುವಲ್ಲಿ ತೊಡಕಾಗಿತ್ತು.
ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ಸತೀಶ್ ಸೈಲ್ ಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಕಾರ್ಯಾಚರಣೆಗೆ ಎದುರಾಗಿರುವ ತೊಡಕಿನ ಬಗ್ಗೆ ತಿಳಿಸಿದ್ದು ಶೀಘ್ರದಲ್ಲಿ ಬಾರ್ಜನ್ನ ತರಿಸಿ ಮಣ್ಣನ್ನ ತೆರವು ಮಾಡುವ ಕಾರ್ಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಹಾನಿಗೊಳಗಾದ ಉಳುವರೆ ಗ್ರಾಮದ ಕುರಿತು ಚರ್ಚೆ ನಡೆಸಿದ ಸತೀಶ್ ಸೈಲ್ ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ ಹೆಚ್ಚಿನ ಹಾನಿಯಾಗಿದ್ದು ಸರ್ಕಾರದಿಂದ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳ ಕುರಿತು ಸಿಎಂ ಜೊತೆ ಸತೀಶ್ ಸೈಲ್ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ