suddibindu.in
ಕಾರವಾರ: ಉತ್ತರಕನ್ನಡ ಜಿಲ್ಲಾಧ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ರಾಷ್ತ್ರೀಯ ಹೆದ್ದಾರಿ 66ರ ಅರಗಾ ನೇವಲ್ ಗೇಟ್ ಬಳಿ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರದಲ್ಲಿ ಸಮಸ್ಯೆ ಉಂಟಾಗಿದೆ.

ಅಗರಾ ಸುತ್ತಮುತ್ತಲು ಕದಂಬಾ ನೌಕಾನೆಯ ಯೋಜನೆಯವರು ಅವೈಜ್ಞಾನಿಕವಾಗಿ ಕಾಂಪೌಂಡ್ ಹಾಕಿರುವ ಕಾರಣ ಮಳೆ ನೀರು ಸರಾಗವಾಗಿ ಸಮುದ್ರ ಸೇರಲು ಸಾಧ್ಯವಾಗದೆ ಹೆದ್ದಾರಿಯಲ್ಲಿ ಜಲಾವೃತವಾಗಿದೆ. ಇದರೊಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಉದ್ದಕ್ಕೂ ನೂರಾರು ವಾಹನಗಳು ಮುಂದೆ ಚಲಿಸಲಾಗದೆ ಅರ್ಧದರಲ್ಲೆ ನಿಲ್ಲುವಂತಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ

ಕಳೆದ ಹತ್ತಾರು ವರ್ಷಗಳಿಂದ ಅಗರಾ ನೇವಲ್ ಗೇಟ್ ಬಳಿ ಹೆದ್ದಾರಿಯಲ್ಲಿ ಇದೆ ಸಮಸ್ಯೆ ಉಂಟಾಗುತ್ತಿದ್ದು, ಪ್ರತಿ ಭಾರಿ ಸಹ ಮಳೆಗಾಲದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಸಮಸ್ಯೆ ಬಗ್ಗೆ ನೇವಲ್ ಅಧಿಕಾರಿಗಳಿಗೆ ಅದೆಷ್ಟೆ ಭಾರಿ ಮನವರಿಕೆ ಮಾಡಿದರು ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ..ಜಿಲ್ಲಾಡಳಿತದಿಂದ ಎಲ್ಲಾ ಸವಲತ್ತುಗಳನ್ನ ಪಡೆದುಕೊಳ್ಳುವ ನೇವಲ್ ಅಧಿಕಾರಿಗಳು ಜಿಲ್ಲಾಡಳಿತದ ಮಾತು ಕೇಳದಂತಾಗಿದೆ. ಏಕಾಏಕಿಯಾಗಿ ಪ್ರವಾಹ ಉಕ್ಕಿ ಬಂದರೆ ಹೆದ್ದಾರಿಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ಪ್ರವಾಹದಲ್ಲಿ ಕೊಚ್ಚಿ ಹೋದರು ಅಚ್ಚರಿಯಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಣೆದುರು ಕಾಣುತ್ತಿದ್ದರು ನೌಕಾ ನೆಲೆಯ ಅಧಿಕಾರಿಗಳು ಮಾತ್ರ ತಮ್ಮಗೆ ಯಾವುದೇ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ…