ಬೆಂಗಳೂರು; ಏರಟೆಲ್, ಜಿಯೋ, ಕಂಪನಿಗಳ ಸಿಮ್‌ಗಳ ರಿಚಾರ್ಜ್ ನಲ್ಲಿ ಏಕಾಏಕಿ ದರಗಳು ಹೆಚ್ಚಾಗಿದ್ದು, ಇದರಿಂದ ಇದುವರೆಗೆ ಇವೆರಡು ಕಂಪನಿಗಳ‌ ಸಿಮ್ ಬಳಕೆ ಮಾಡುತ್ತಿದ್ದ ಗ್ರಾಹಕರು ಈಗ ಇದನ್ನ ಕೈ ಬಿಟ್ಟು, ಸರ್ಕಾರಿ ಸ್ವಾಮ್ಯದ BSNLನತ್ತ ಮುಖ ಮಾಡಿದ್ದಾರೆ.

JIO, AIRTEL, ಕಂಪನಿಯ ಸಿಮ್ ರಿಚಾರ್ಜ ತುಟ್ಟಿಯಾಗಿದ್ದರ ಪರಿಣಾಮ ಮೂರು ದಿನದಲ್ಲಿ 70ಲಕ್ಷ ಗ್ರಾಹಕರು BSNL ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ‌(ಪೋರ್ಟ್) ಮಾಡಿಕೊಂಡಿದ್ದಾರಂತೆ . AIRTEL ಮತ್ತು JIO ದರದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮತ್ತೆ BSNL ನೆಟವರ್ಕಗೆ ಭಾರೀ ಬೇಡಿಕೆ ಬಂದಿದೆ.