suddibindu.in
Karwar/goa| ಕಾರವಾರ/ಗೋವಾ : ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಜನ ಮಹಾಮಳೆಗೆ ಜನ‌ಮನೆ ಮಠ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರವಂತಾಗಿದೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಹೇರಳವಾಗಿ ಆಗುತ್ತಿದೆ.‌ಭಾರೀ ಮಳೆಯಿಂದ ಗೋವಾದ ಬಿಚೋಲಿಮ್‌ನಲ್ಲಿ (Bicholim, Goa) ಹೆದ್ದಾರಿ ಜಲಾವೃತಗೊಂಡು ಥಾರ್ ವಾಹನವೊಂದು (Mahendra Thar) ಹೆದ್ದಾರಿಯಲ್ಲಿ ಸಿಲುಕಿಕೊಂಡಿದೆ.

ಗೋವಾದಲ್ಲೂ ಮಳೆ ಆರ್ಭಟಿಸುತ್ತಿದೆ. ಮಳೆ ನೀರಿನಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಗೋವಾ ರಾಜ್ಯದ ಬಿಚೋಲಿಮ್‌ನಲ್ಲಿ ವಾಹನ ಸವಾರನೊಬ್ಬ ತನ್ನ ಥಾರ್ ವಾಹನವನ್ನು ಜಲಾವೃತವಾದ ರಸ್ತೆಯಲ್ಲಿ ಸಾಹಸ ಮಾಡಲು ಪ್ರಯತ್ನಿಸುವಾಗ ಬಿದ್ದ ಮರದ ಕೆಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ನಂತರ ವಾಹನದ ಒಳಗೆ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ತಂಡ ದಾವಿಸಿದೆ.