ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : 83174 84063
www.suddibindu.in
Karwar : ಕಾರವಾರ: ಉತ್ತರಕನ್ನಡ ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸಮುದ್ರದಲ್ಲಿ ಕಡಲ ಅಲೆಯ ಅಬ್ಬರ ಜೋರಾಗಿದೆ. ಹೀಗಾಗಿ ಪ್ರವಾಸಿಗರು ಕಡಲತೀರದತ್ತ ಸುಳಿಯದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ.ಈ ನಡುವೆ ಸಹ ಪ್ರವಾಸಿಗನೋರ್ವ ಸಮುದ್ರದಲ್ಲಿ ಈಜಲು ಹೋಗಿ ಲೈಪ್ ಗಾರ್ಡ್ ಸಿಬ್ಬಂದಿಗಳಿಂದ ಗೂಸಾ ತಿಂದಿರುವ ಘಟನೆ ಕಾರವರ ನಗರದ ರವೀಂದ್ರನಾಥ ಕಡಲತೀರದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲಿನ ಜಲಪಾತಗಳು ಹಾಗೂ ಕಡಲತೀರದ ಕಡೆ ಹೋಗದಂತೆ ಪ್ರವಾಸಿಗರಿಗ ಜಿಲ್ಲಾಡಳಿತ ನಿಷೇಧ ಹೆರಿದೆ. ಎಲ್ಲಾ ಕಡೆ ನಾಮಫಲಕ ಕೂಡ ಅಳವಡಿಸಿದೆ.ಆದರೆ ಸಮುದ್ರದಲ್ಲಿ ರಕ್ಕಸದಂತಹ ಅಲೆಗಳು ಅಪ್ಪಳಿಸುತ್ತಿದ್ದರು ಕಳ್ಳ ದಾರಿಯಲ್ಲಿ ಬಂದ ಪ್ರವಾಸಿಗನೋರ್ವ ಸಮುದ್ರದಲ್ಲಿ ಮೋಸು ಮಸ್ತಿಗೆ ಇಳಿದಿದ್ದ, ಇದನ್ನ ಕಂಡ ಲೈಪ್ ಗಾರ್ಡ ಸಿಬ್ಬಂದಿಗಳು ಸರಿಯಾಗಿ ನಾಲ್ಕು ಏಟು ಹಾಕಿ ಬುದ್ದಿ ಮಾತು ಹೇಳಿ ಕಳುಹಿಸಿದ್ದಾರೆ..