suddibindu.in
Karwar: ಕಾರವಾರ :ಉತ್ತರ ಕನ್ನಡ (uttarkannada) ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ತಾರೀಬಾಗಿನಲ್ಲಿ ಕಾಮಗಾರಿ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದಿದ್ದು, ಇದಕ್ಕೆ ಎಂ ಸ್ಯಾಂಡ್( m sand) ಬಳಕೆ ಮಾಡಿರುವುದೆ ಕಾರಣ ಎನ್ನಲಾಗಿದೆ.
(Kumta)ಕುಮಟಾ ತಾಲೂಕಿನ ಅಘನಾಶಿನಿ ನದಿಗೆ ಅಡ್ಡಲಾಗಿ ಮಿರ್ಜಾನ ತಾರೀಬಾಗಿನಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದೆ ಎನ್ನುವ ಆರೋಪ ಇದೆ. ಹೀಗಾಗಿ ಸ್ಥಳೀಯರು ಈ ಕಾಮಗಾರಿ ಅಂದಾಜು ಪ್ರತಿ ನೀಡುವಂತೆ ಲಿಖಿತ ಪತ್ರವನ್ನ ಸಹ ನೀಡಿದ್ದಾರೆನ್ನಲಾಗಿದೆ. ಆದರೆ ಆರಂಭದಲ್ಲೆ ಅವೈಜ್ಞಾನಿಕ ಕಾಮಗಾರಿಯನ್ನ ಆರಂಭಿಸಿರುವ ಕಂಪನಿ ಕಾಮಗಾರಿಯ ಅಂದಾಜು ಪತ್ರಿಯತ್ನ ನೀಡದೆ ತಪ್ಪಿಸಿಕೊಂಡಿರುವುದನ್ನ ನೋಡಿದರೆ ಇದರಲ್ಲಿ ಸಂಪೂರ್ಣ ಕಳಪೆಯಾಗಿರುವುದು ಕಂಡು ಬರುತ್ತಿದೆ.
ಇದನ್ನೂ ಓದಿ
- ಬಡತನದ ನಡುವೆಯೂ CA ಸಾಧನೆ: ಶಿರಸಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ
- ವಾರದ_ಕಥನ…ಕಾಣದ-ಬಿಂಬ ೩, ಸುಬ್ಬಮ್ಮ ಅನಾಥೆಯಲ್ಲ
- ಕಾರವಾರದಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರದ ರೆಂಬೆ ಬಿದ್ದು ಬಾಲಕಿಗೆ ಗಾಯ
ಇನ್ನೂ ಈ ಸಂಪೂರ್ಣ ಕಾಮಗಾರಿಗೆ ಉಪ್ಪು ನೀರು ಹಾಗೂ ಉಪ್ಪು ನೀರಿನ ಮರಳನ್ನ ಬಳಕೆ ಮಾಡಲಾಗಿದೆ. ಕಾಮಗಾರಿ ಆರಂಭದಲ್ಲೆ ಇದು ಈ ರೀತಿ ಕುಸಿತವಾಗಲು ಆರಂಭಾಗಿರುವುದನ್ನ ನೋಡಿದರೆ ಸೇತುವೆ ಎಷ್ಟು ದಿನ ಬಳಕೆಗೆ ಬರಬಹುದು ಎನ್ನುವುದು ಸಾರ್ವಜನಿಕರು ಆಲೋಚನೆ ಮಾಡಬೇಕಿದೆ. ಕಾಮಗಾರಿಗೆ ಉಪ್ಪು ನೀರು ಹಾಗೂ ಉಪ್ಪುನೀರಿನ ಮರಳನ್ನ ಬಳಕೆ ಮಾಡಿರುವುದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಈ ಎಲ್ಲಾ ದಾಖಲೆಯನ್ನ ಮುಂದಿನ ವರದಿಯಲ್ಲಿ ವಿಡಿಯೋ ಸಹಿತ ಸುದ್ದಿ ಪ್ರಕಟಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆ ಪಡೆದ ಕಂಪನಿ ವಿರುದ್ಧ ಕ್ರಮ ಜರುಗಿಸದೆ ಹೋದರೆ ಕಾಮಗಾರಿ ಪೂರ್ಣಗೊಂಡು ಸಂಚರಿಸುವಾಗ ಸೇತುವೆ ಕುಸಿದು ಬಿದ್ದರೆ ಅದಕ್ಕೆ ಯಾರು ಹೊಣೆ.?