ಸುದ್ದಿಬಿಂದು ಬ್ಯೂರೋ
Sirsi/Bhatkal ಭಟ್ಕಳ / ಶಿರಸಿ : ಉತ್ತರಕನ್ನಡ ಜಿಲ್ಲೆಯ ಭಟ್ಕಳ‌ ಹಾಗೂ ಶಿರಸಿಯಲ್ಲಿ ನಡೆದ‌ ಪ್ರತ್ಯೇಕ ಅಪಘಾತದಲ್ಲಿ ಇಬ್ಬರೂ ಮಹಿಳೆಯರು ಮೃತಪಟ್ಟಿರುವ ಘಟನೆ ನಡೆದಿದೆ.

ಭಟ್ಕಳ ತಾಲೂಕಿನ ಶಿರಾಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಕಾರ್ಗಲಗ ಮೂಲದ 23 ವರ್ಷದ ನಿಕಿತಾ ಮಹಾಬಲೇಶ್ವರ ಗೊಂಡ ಸ್ಥಳದಲ್ಲೆ‌ ಮೃತಪಟ್ಟಿದ್ದಾಳೆ. ಇನ್ನೂ ಬೈಕ್‌ ಚಲಾಯಿಸುತ್ತಿದ್ದ ಭಟ್ಕಳ ಗುಲ್ಮಿ ನಿವಾಸಿ ಗಣೇಶ್ ಗೊಂಡ (35)ಗೆ ಸಣ್ಣಪುಟ್ಟ ಗಾಯ ಬೈಕ್‌ನಲ್ಲಿದ್ದ ಇನ್ನೋರ್ವ ಗುಲ್ಮಿ ನಿವಾಸಿ ಗಿರಿಜಾ ಗೊಂಡ (45), ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗಿರಿಜಾ ಗೊಂಡ ಅವರನ್ನು ಮಂಗಳೂರಿಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನೂ ಕೇರಳದಿಂದ ಶಿರಸಿ ಕಡೆ ಬರುತ್ತಿದ್ದ ಕಾರು ಶಿರಸಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇದರಿಂದಾಗಿ ಕಾರಿನಲ್ಲಿದ್ದ ಅನಿತಾ ಮಾದವನ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಅಪಘಾತದಲ್ಲಿ ಅಮಲಾ ನಿತಿನ್, ಮಾಧವನ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.